LifestylePolitics

ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ಕಾಳಿ ದೇವಿಗೆ ಅರ್ಪಣೆ!

ಕಾರವಾರ; ಪ್ರಧಾನಿ ನರೇಂದ್ರ ಮೋದಿ ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ.. ಕೆಲವರು ಅಂಧಾಭಿಮಾನಿಗಳು ಕೂಡಾ ಇದ್ದಾರೆ.. ಇಂಥವರು ಮೋದಿಗಾಗಿ ಏನು ಬೇಕಾದರೂ ಸಮರ್ಪಣೆ ಮಾಡುತ್ತಾರೆ.. ಅಂತಹ ಕಾರವಾರದ ಅಂಧಾಭಿಮಾನಿಯೊಬ್ಬ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತುಕೊಂಡು ತನ್ನ ಬೆರಳನ್ನೇ ಕತ್ತರಿಸಿ ಕಾಳಿಮಾತೆಗೆ ಅರ್ಪಣೆ ಮಾಡಿದ್ದಾನೆ..

ಇದನ್ನೂ ಓದಿ; ಉದ್ಯೋಗ ಕಳೆದುಕೊಂಡರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ..?

ಬೆರಳನ್ನೇ ಕತ್ತರಿಸಿದ ಅರುಣ್‌ ವರ್ಣೇಕರ್‌;

ನೆಚ್ಚಿನ ನಾಯಕರ ಗೆಲುವಿಗಾಗಿ ಹರಕೆ ಹೊರುವವರು, ಹುಂಡಿಗೆ ಕಾಣಿಕೆ ಅರ್ಪಿಸುವವರನ್ನು ನೋಡಿದ್ದೇವೆ.. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಅರುಣ್‌ ವರ್ಣೇಕರ್‌ ಎಂಬುವವರು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ.. ಇವರು ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ.. ಅದಕ್ಕಾಗಿ ಕಾಳಿ ಮಾತೆಗೆ ತನ್ನ ಬೆರಳನ್ನೇ ಕಾಣಿಕೆಯಾಗಿ ನೀಡಿದ್ದಾರೆ.. ದೇವಿಯ ಮುಂದೆ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.

ಇದನ್ನೂ ಓದಿ; ಸಂತಾನ ಇಲ್ಲದವರು ಇವುಗಳನ್ನು ತಿಂದರೆ ಸಾಕು!

ಮನೆಯಲ್ಲಿ ದಿನಾ ಮೋದಿಗೆ ಪೂಜೆ;

ಅರುಣ್‌ ವರ್ಣೇಕರ್‌ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದವರು.. ಇವರು ಪ್ರಧಾನಿ ಮೋದಿ ಎಂದರೆ ಪ್ರಾಣವನ್ನೇ ಕೊಡುತ್ತಾರೆ.. ತಮ್ಮ ಮನೆಯಲ್ಲಿ ಅರುಣ್‌ ಅವರು ಮೋದಿಗಾಗಿ ಗುಡಿಯನ್ನೇ ನಿರ್ಮಾಣ ಮಾಡಿದ್ದಾರೆ.. ಪ್ರತಿದಿನ ಅವರ ಮನೆಯಲ್ಲಿ ಮೋದಿಯ ಪೂಜೆ ನಡೆಯುತ್ತದೆ.. ಇದೀಗ ಲೋಕಸಭಾ ಚುನಾವಣೆ ಎದುರಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದು, ಮೋದಿ ಹ್ಯಾಟ್ರಿಕ್‌ ಪ್ರಧಾನಿಯಾಗಬೇಕೆಂದು ಅರುಣ್‌ ವರ್ಣೇಕರ್‌ ಬಯಸುತ್ತಿದ್ದಾರೆ.. ಇದಕ್ಕಾಗಿ ಅರುಣ್‌ ವರ್ಣೇಕರ್‌ ಕಾಳಿ ಮಾತೆಗೆ ಹರಕೆ ಹೊತ್ತಿದ್ದಾರೆ.. ಜೊತೆಗೆ ಅವರು ತಮ್ಮ ಎಡಗೈ ಬೆರಳನ್ನು ಕತ್ತರಿಸಿ ಕಾಳಿ ಮಾತೆಗೆ  ಅರ್ಪಿಸಿದ್ದಾರೆ.. ಅದರ ಫೋಟೋಗಳನ್ನು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ..

ಇದನ್ನೂ ಓದಿ; ಶೋಭಾಗೆ ಅಲ್ಲಿ ಗೋಬ್ಯಾಕ್ ಅಂದಿದ್ದಕ್ಕೆ ಇಲ್ಲಿಗೆ ಬಂದಿದ್ದಾರೆ; ಸಿಎಂ

ಮಾ ಕಾಳೀಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ;

ಅರುಣ್‌ ವರ್ಣೇಕರ್‌ ಅವರು ಎಡಗೈ ಬೆರಳು ಕತ್ತರಿಸಿಕೊಂಡಿದ್ದು, ಆ ಬೆರಳ ತುಂಡಿನಿಂದ ಸುರಿಯುತ್ತಿದ್ದ ರಕ್ತದಿಂದ ಮಾ ಕಾಳಿಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ, ಮೋದಿ ಬಾಬಾ ಪಿಎಂ, ತೀಸ್ರೀ ಬಾರ್‌, 378+, ಮೇರಾ ಮೋದಿ ಬಾಬಾ ಸಬ್‌ಸೇ ಮಹಾನ್‌.. ಹೀಗಂತ ಗೋಡೆ ಹಾಗೂ ಪೋಸ್ಟರ್‌ನಲ್ಲಿ ಬರೆದಿದ್ದಾನೆ. ಈತ 2019ರಲ್ಲೂ ಇದೇ ರೀತಿ ಕೈ ಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ್ದ ಎಂದು ತಿಳಿದುಬಂದಿದೆ..

ಮುಂಬೈ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡ್ತಿದ್ದ ಅರುಣ್;‌

ಮೋದಿ ಅಭಿಮಾನಿ ಅರುಣ್‌ ವರ್ಣೇಕರ್‌ ಅವರು ಮುಂಬೈನಲ್ಲಿ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದ.. ಆದ್ರೆ ತಂದೆ-ತಾಯಿಯ ಆರೈಕೆ ಮಾಡುವ ಸಲುವಾಗಿ ಕೆಲಸ ಬಿಟ್ಟು ಈಗ ಕಾರವಾರದಲ್ಲೇ ನೆಲೆಸಿದ್ದಾನೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಸೊಳ್ಳೆ ಹೆಚ್ಚಾಗಿದೆಯೇ..?; ಅವುಗಳ ನಿಯಂತ್ರಣ ಬಹಳ ಸುಲಭ!

 

Share Post