BengaluruCinema

ಕೇಕ್ ಶೋನಲ್ಲಿ ಪುನೀತ್‌ ರಾಜ್‌ ಕುಮಾರ್‌

ಬೆಂಗಳೂರು: 47ನೇ ವರ್ಷದ ಈ ಕೇಕ್ ಶೋನಲ್ಲಿ ಸ್ಟಾಚ್ಯು ಆಫ್ ಲಿಬರ್ಟಿ ಮತ್ತು ಜಂಗಲ್ ಬುಕ್ ಈ ಬಾರಿಯ ಇದೆ.ಅದರ ಜೊತೆಗೆ ಅಪ್ಪುವಿನ ಪ್ರತಿಮೆ ಎಲ್ಲರ ಕಣ್ಮನ ಸೆಳೆಯಿತು.ಸರಳತೆಯ , ಕರುನಾಡ ರತ್ನ, ಪ್ರೀತಿಯ ಅಪ್ಪು, ಚಂದನವನದ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನಗಲಿ ಒಂದೂವರೆ ತಿಂಗಳು ಕಳೆದಿವೆ. ಆದರೂ ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ. ಈಗಲೂ
ರಾಜ್ಯಾದ್ಯಂತ ಅಪ್ಪು ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಡೆಯುತ್ತಿದೆ. ನಗರದ ಸೆಂಟ್​ ಜೋಕೇಕ್​ ಶೋ ನಸೆಫ್​ ಶಾಲಾ ಆವರಣದಲ್ಲಿ ಕೇಕ್​ ಶೋ ಆಯೋಜನೆ ಮಾಡಲಾಗಿದೆ. ಈ ಶೋಗೆ ಪುನೀತ್​ ರಾಜ್​ಕುಮಾರ್​ ಎಂಟ್ರಿ ಕೊಟ್ಟಿದ್ದಾರೆ.ಕೇಕ್ ಪ್ರದರ್ಶನಕ್ಕಾಗಿಯೇ ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್​ನ ಸುಮಾರು ವಿವಿಧ ಡಿಸೈನ್​ಗಳನ್ನು ತಯಾರಿಸಿದ್ದಾರೆ.ಕಸ್ತೂರಿ ನಿವಾಸ ಕನ್ನಡಿಗರ ಮನೆಮಾತಾಗಿದೆ. ಜೊತೆಗೆ ರಾಜಕುಮಾರ ಸಿನಿಮಾದಲ್ಲಿ ಅಪ್ಪು ಹೆಗಲ ಮೇಲೆ ಪಾರಿವಾಳ ಕೂತಿರುವ ಚಿತ್ರ ಸಖತ್​ ಟ್ರೆಂಡ್​ ಆಗಿತ್ತು. ಹೀಗಾಗಿ ಅದರಂತೆಯೇ ಅಪ್ಪು ಪ್ರತಿಮೆ ಅನಾವರಣಗೊಂಡಿದೆ.ಈ ಪುತ್ಥಳಿಯನ್ನು ಸುಮಾರು 150 ಕೆಜೆ ಚಾಕೋಲೆಟ್​, ಸಕ್ಕರೆ, ಅಡಿಬಲ್​ ಕಲರ್​ ಬಳಸಿಕೊಂಡು ಮಾಡಲಾಗಿದೆ. 3 ಅಡಿ ಉದ್ದ,ಅಗಲವಿದೆ. 15 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ತಯಾರಿಸಿದ್ದಾರೆ.

Share Post