ಚುನಾವಣೆಯಲ್ಲಿ ಹಂಚಲು ಹಣ ಸಂಗ್ರಹಿಸಿಟ್ಟಿದ್ದ ಆರೋಪ; ಸಚಿವ ಜಮೀರ್ ತಂಗಿದ್ದ ಹೋಟೆಲ್ ಮೇಲೆ ದಾಳಿ!
ಬೆಂಗಳೂರು; ತೆಲಂಗಾಣ ಚುನಾವಣಾ ಕಾವು ಜೋರಾಗಿದೆ. ಎಲ್ಲೆಡೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಇನ್ನೊಂದೆಡೆ ಚುನಾವಣಾ ಅಕ್ರಮಗಳೂ ಹೆಚ್ಚಾಗಿ ನಡೆಯುತ್ತಿವೆ. ಪೊಲೀಸರು ಕೂಡಾ ಸಾಕಷ್ಟು ಅಲರ್ಟ್ ಆಗಿದ್ದು, ಅಲ್ಲಲ್ಲಿ ದಾಳಿಗಳು ಕೂಡಾ ನಡೆಯುತ್ತಿವೆ. ಾದೇ ರೀತಿಯ ಕರ್ನಾಟಕ ಸರ್ಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಂಗಿದ್ದ ಹೈದರಾಬಾದ್‌ನ ಹೋಟೆಲ್ ಮೇಲೂ ತಡರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ.
ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಂಗಿದ್ದರು. ಇಲ್ಲಿಂದ ಅಕ್ರಮವಾಗಿ ಹಣ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರ ತಡರಾತ್ರಿ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ಪೊಲೀಸರು ದೀಢಿರ್ ಅಂತ ದಾಳಿ ಮಾಡಿದ್ದು, ಜಮೀರ್ ಇದ್ದ ಕೊಠಡಿ ಹಾಗೂ ಅವರ ಬೆಂಬಲಿಗರು ತಂಗಿದ್ದ ಕೊಠಡಿಗಳನ್ನು ಕೂಡಾ ಪರಿಶೀಲನೆ ಮಾಡಿದ್ದಾರೆ.
ಆದ್ರೆ ಈ ವೇಳೆ ಪೊಲೀಸರು ಏನೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕೂಡಾ ಬರೆದುಕೊಂಡಿದ್ದಾರೆ. ನಾನು ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಉಳಿದುಕೊಂಡಿದ್ದೇನೆ. ಈ ಹೋಟೆಲ್ ಮೇಲೆ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿದ್ದು, ನನ್ನ ಕೊಠಡಿಯನ್ನೂ ಪರಿಶೀಲಿಸಿದ್ದಾರೆ. ಆದ್ರೆ ಅವರಿಗೆ ಏನೂ ಸಿಕ್ಕಿಲ್ಲ. ಬರಿಗೈಯಲ್ಲಿ ಹಿಂತಿರುಗಿದ್ದಾರೆ.
ನಾನು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದಿದ್ದೆ. ಜೊತೆ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ವಾತಾವರಣವಿದೆ. ಇದರಿಂದ ಭ್ರಮನಿರಸನವಾಗಿರುವ ಬಿಆರ್‌ಎಸ್ ಹಾಗೂ ಬಿಜೆಪಿ ನಾಯಕರು ಈ ದಾಳಿ ಮಾಡಿಸಿವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೊಂಡಿದ್ದಾರೆ.