CrimeDistricts

ಕಾರಿಗೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ನುಗ್ಗಿದ ಬಸ್‌; ಪವಾಡ ರೀತಿಯಲ್ಲಿ 50 ಪ್ರಯಾಣಿಕರು ಸೇಫ್‌

ರಾಮನಗರ; ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್‌ ಒಂದು ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್‌ ಐವತ್ತು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಗರ ಜಿಲ್ಲೆ ಮೇಳೇಹಳ್ಳಿ ಗೇಟ್‌ ಬಳಿ ನಡೆದಿದೆ.

ಮಾಗಡಿಯಿಂದ ರಾಮನಗರಕ್ಕೆ ಬರುತ್ತಿದ್ದ ಕೆಎ 42, ಎಫ್- 1778 ನಂಬರಿನ ಬಸ್ಸೇ ಅಪಘಾತಕ್ಕೀಡಾಗಿರುವುದು. ಬಸ್‌ ಮೇಳೇಹಳ್ಳಿ ಗೇಟ್ ಬಳಿ ಬಂದಾಗ, ಎದುರಿಗೆ ಕಾರೊಂದು ಬಂದಿದ್ದು, ಬಸ್​ ಡ್ರೈವರ್​, ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿದ್ದಾರೆ. ಸ್ಟೇರಿಂಗ್‌ ಪಕ್ಕಕ್ಕೆ ಎಳೆದಾಗ ಬಸ್‌ ರಸ್ತೆ ಪಕ್ಕದ ಹಳ್ಳಕ್ಕೆ ನುಗ್ಗಿದೆ.
ಘಟನೆಯಲ್ಲಿ ಬಸ್‌ನ ಮುಂಭಾಗ ಕೊಂಚ ಜಖಂಗೊಂಡಿದೆ.

Share Post