DistrictsPolitics

ವಿ.ಸೋಮಣ್ಣ ಬಿಜೆಪಿ ತೊರೆಯೋದು ಪಕ್ಕಾನಾ..?; ಡಿ.6ಕ್ಕೆ ಮನಸಿನ ಮಾತು ಹೇಳ್ತಾರಂತೆ..!

ಮೈಸೂರು; ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ವಿ.ಸೋಮಣ್ಣ ಅವರು ರಾಜ್ಯ ವಿಧಾನಸಭಾ ಚುನಾವಣೆಗೂ ಮುಂಚಿನಿಂದ ಅಸಮಾಧಾನದಿಂದ ಇದ್ದಾರೆ. ಚುನಾವಣೆಗೆ ಮೊದಲೇ ಅವರು ಪಕ್ಷ ತೊರೆಯುತ್ತಾರೆ ಎಂದು ಹೇಳಲಾಗುತ್ತಿತ್ತು. ಈ ನಡುವೆ ಅವರು ಬಯಸಿದ ಕ್ಷೇತ್ರದಿಂದ ಟಿಕೆಟ್‌ ಕೊಡದೇ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಪಕ್ಷ ಸೂಚಿಸಿತು. ಇದರ ಜೊತೆಗೆ ಇನ್ನೊಂದು ಕ್ಷೇತ್ರದಲ್ಲೂ ಟಿಕೆಟ್‌ ನೀಡಿತ್ತು. ಒಲ್ಲದ ಮನಸ್ಸಿನಿಂದಲೇ ವಿ.ಸೋಮಣ್ಣ ಅವರು ಎರಡೂ ಕಡೆ ಕಣಕ್ಕಿಳಿದು ಸೋತರು. ಅನಂತರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದು ಎಂದು ಬಯಸಿದ್ದರು. ಆದ್ರೆ, ಅವರ ಆಸೆ ಈಡೇರಿಲ್ಲ. ಈ ಕಾರಣಕ್ಕಾಗಿ ವಿ.ಸೋಮಣ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ವಿ.ಸೋಮಣ್ಣ ಅವರು ಕೂಡಾ ಮಾತನಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಅವರು, ಡಿಸೆಂಬರ್‌ 6ರ ನಂತರ ನನ್ನ ಮನಸಿ ಭಾವನೆಯನ್ನು ಹೇಳುತ್ತೇನೆ ಎನ್ನುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದ್ದಾರೆ.  ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳೀಕೆಯನ್ನು ಸಮರ್ಥಿಸಿ ಮಾತನಾಡಿರುವ ಸೋಮಣ್ಣ ಅವರು, ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆಯಾಗಿದೆ ಎಂದು ಹೇಳಿದ್ದಾರೆ. ರಾಜಕಾರಣಕ್ಕೆ ಯಾವುದೇ ಕುಟುಂಬಕ್ಕೆ ಸೀಮಿತ ಅಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿರುವ ಸೋಮಣ್ಣ ಅವರು, ಡಿಸೆಂಬರ್‌ ಆರರ ಬಳಿಕ ನನಗೆ ಯಾವ ರೀತಿಯ ಹೊಡೆತ ಆಗಿದೆ. ಯಾರು ನನಗೆ ಹೊಡೆತ ಕೊಟ್ಟಿದ್ದಾರೆ ಎಂಬುದರ ಬಗ್ಗೆ ನನ್ನ ಮನಸಿನ ಭಾವನೆಯನ್ನು ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ.

 

Share Post