Politics

ಪಂಜಾಬ್‌ ಚುನಾವಣೆ : ನವಜೋತ್‌ ಸಿಂಗ್‌ ವಿರುದ್ಧ ಬಿಕ್ರಾಮ್‌ ಸಿಂಗ್‌ ಕಣಕ್ಕೆ

ಚಂಡೀಗಢ : ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ಶಿರೋಮಣಿ ಅಕಾಲಿದಳ (ಎಸ್‍ಎಡಿ) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಸ್ಪರ್ಧಿಸಲಿದ್ದಾರೆ. ಮುಂಬರುತ್ತಿರುವ ಪಂಜಾಬ್‌ನ ಅಮೃತಸರ್‌ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಬಿಕ್ರಾಮ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿದ್ಧು ವಿರುದ್ಧ ಪೈಪೋಟಿ ಏರ್ಪಡಲಿದೆ.

ಅಮೃತಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್, “ಬಿಕ್ರಾಮ್ ಸಿಂಗ್ ಮಜಿಥಿಯಾ ಅವರು ಸಿಧು ಅವರ ದುರಹಂಕಾರವನ್ನು ಅಡಗಿಸಲಿದ್ದಾರೆ, ಸಿಧು ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಎಂದು  ಹೇಳಿದ್ದಾರೆ. ಬಿಕ್ರಾಮ್‌ ಸಿಂಗ್‌ ಅವರಿಗೆ ಸುಖಬೀರ್‌ ಅವರು ಸೋದರ ಸಂಬಂಧಿ ಆಗಿದ್ದಾರೆ.

Share Post