ಮಾರ್ಚ್ 17ಕ್ಕೆ ಜೇಮ್ಸ್ ರಿಲೀಸ್ ಪಕ್ಕಾ
ಜೇಮ್ಸ್ ಚಿತ್ರದ ಫರ್ಸ್ಟ್ ಲುಕ್ ಒಂದು ಬಿಡುಗಡೆಯಾಗಿದ್ದು ಈಗ ಸಿನಿಮಾ ಕುರಿತು ಸಖತ್ ಹೈಪ್ ಸೃಷ್ಠಿಯಾಗಿದೆ. ಅಪ್ಪು ಅವರ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಅನ್ನು ನಿರ್ಮಾಪಕರು ಮಾರ್ಚ್ 17ಕ್ಕೆ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.
ಅಭಿಮಾನಿಗಳ ಒತ್ತಾಸೆಯಂತೆಯೇ ಸಿನಿಮಾವನ್ನು ಮಾರ್ಚ್ 17ರಂದೇ ಬಿಡುಗಡೆ ಮಾಡಲು ಚಿತ್ರತಂಡ ಒಪ್ಪಿಗೆ ಸೂಚಿಸಿದೆ. ಆದರೆ ಕೊರೊನಾ ಕಾರಣದಿಂದ 50-50 ನಿಯಮ ಜಾರಿಯಲ್ಲಿರುವ ಕಾರಣ ಏನು ಆಗಲಿದೆ ಎಂದು ಕಾದು ನೋಡಬೇಕಿದೆ. ಪುನೀತ್ ಅವರಿದ್ದಾಗಲೇ ಮಾರ್ಚ್ 17ಕ್ಕೆ ತೆರೆಗೆ ತರಲು ಮಾತುಕತೆ ಮಾಡಿದ್ದೆವು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು ಫೆಬ್ರುವರಿ ಅಂತ್ಯಕ್ಕೆ ಸಿನಿಮಾದ ಎಲ್ಲಾ ಕೆಲಸವನ್ನು ಮುಗಿಸುವ ಭರವಸೆಯಲ್ಲಿ ಚಿತ್ರತಂಡವಿದೆ. ಇನ್ನು ಶೂಟಿಂಗ್ ವೇಳೆ ಅಪ್ಪು ಅವರ ಧ್ವನಿ ರೆಕಾರ್ಡ್ ಆಗಿದ್ದು ಅದನ್ನೇ ಸಿನಿಮಾದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ನಿರ್ಮಾಪಕ ಕಿಶೋರ್ ತಿಳಿಸಿದ್ದಾರೆ.