CrimePolitics

ಮುನಿರತ್ನ ಏಯ್ಡ್ಸ್‌ ರಕ್ತಪ್ರಯೋಗ ವಿಚಾರ; ಸುದ್ದಿ ಕೇಳಿ ಬೆಚ್ಚಿಬಿದ್ದ ಆರ್‌.ಅಶೋಕ್‌!

ಬೆಂಗಳೂರು; ಶಾಸಕ ಮುನಿರತ್ನ ಅವರು ವಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ಏಯ್ಡ್ಸ್‌ ಪೀಡಿತರ ರಕ್ತ ಇಂಜೆಕ್ಟ್‌ ಮಾಡಿಸಲು ಪ್ಲ್ಯಾನ್‌ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.. ಈ ಸುದ್ದಿ ಕೇಳಿ ವಿಪಕ್ಷ ನಾಯಕ ಆರ್‌.ಅಶೋಕ್‌ ಬೆಚ್ಚಿಬಿದ್ದಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿರುವ ಆರ್‌.ಅಶೋಕ್‌, ಶಾಸಕ ಮುನಿರತ್ನ ಅವರನ್ನು ನಾವು ಯಾರೂ ಕೂಡಾ ಬೆಂಬಲಿಸೋದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ..
ಇಂತಹ ಕೃತ್ಯಗಳು ರಾಜಕೀಯದಲ್ಲಿ ನಡೆಯೋದಾದರೆ ಯಾವ ರಾಜಕಾರಣಿಯೂ ಬದುಕೋದಿಲ್ಲ.. ಯಾರೂ ಕೂಡಾ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ಲ.. ನಾವು ಯಾರನ್ನು ನಂಬೋದು, ಹೇಗೆ ಜನರ ಬಳಿ ಹೋಗೋದು ಎಂದು ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.. ಜನರ ಬಳಿಗೆ ಹೋಗದಿದ್ದರೆ ಜನ ನಮ್ಮನ್ನು ನಂಬೋದಿಲ್ಲ.. ಹೋದರೆ ಇಂತಹದ್ದೇನಾದರೂ ಆದರೆ ಎಂಬ ಭಯ ಶುರುವಾಗಿದೆ ಎಂದು ಆರ್‌.ಅಶೋಕ್‌ ಹೇಳಿದ್ದಾರೆ..
ಏಯ್ಡ್ಸ್‌ ರಕ್ತವನ್ನು ನನಗೆ ಒಬ್ಬನಿಗೇ ಅಲ್ಲ. ಡಿ.ಕೆ.ಸುರೇಶ್‌ ಹಾಗೂ ಕುಸುಮಾ ಹುನುಮಂತರಾಯಪ್ಪ ಅವರಿಗೂ ಇಂಜೆಕ್ಟ್‌ ಮಾಡಿಸಲು ಸಂಚು ನಡೆದಿತ್ತು ಎಂದು ಹೇಳಲಾಗಿದೆ.. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆರ್‌.ಅಶೋಕ್‌ ಆಗ್ರಹ ಮಾಡಿದ್ದಾರೆ.. ಮುನಿರತ್ನ ಅವರು ನಮ್ಮ ಪಕ್ಷಕ್ಕೆ ಐದು ವರ್ಷದ ಹಿಂದೆ ಬಂದಿದ್ದಾರೆ.. ಆದ್ರೆ ಅವರು ಕಾಂಗ್ರೆಸ್‌ನಲ್ಲಿ 30 ವರ್ಷದಿಂದ ಇದ್ದರು ಎಂದಿರುವ ಆರ್‌.ಅಶೋಕ್‌, ನಾವು ಮಂತ್ರಿಗಳಾಗಿ, ಶಾಸಕರಾಗಿ ಕೆಲಸ ಮಾಡುವ ಭಯ ಆಗುತ್ತಿದೆ ಎಂದಿದ್ದಾರೆ..
ಯಾರೇ ಆಗಲಿ ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಸರ್ಕಾರ ಹಾಗೂ ಗೃಹಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆರ್.ಅಶೋಕ್‌ ಆಗ್ರಹ ಮಾಡಿದ್ದಾರೆ.. ಈಗಾಗಲೇ ಮುನಿರತ್ನ ಅವರಿಗೆ ಪಕ್ಷದಿಂದ ನೋಟಿಸ್‌ ನೀಡಲಾಗಿದೆ.. ಅವರು ಜೈಲಿನಲ್ಲಿದ್ದು, ಸರ್ಕಾರ ತನಿಖೆ ಮಾಡಬೇಕಿದೆ.. ತನಿಖೆ ವರದಿಯ ಮೇಲೆ ನಮ್ಮ ಪಾರ್ಟಿ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ..

Share Post