LifestyleNational

ಐದು ಮದುವೆಯಾಗಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌!; ಮುಂದೇನಾಯ್ತು..?

ಮಧ್ಯಪ್ರದೇಶ; ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬ ಐದು ಮದುವೆಯಾಗಿದ್ದು, ಮದುವೆಯಾಗುವುದನ್ನು ಈಗಲೂ ಮುಂದುವರೆಸಿದ್ದಾನೆ.. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಹಿಳೆಯೊಬ್ಬರು ದೂರುಕೊಟ್ಟಿದ್ದಾರೆ.. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋರ್ಟ್‌ ಆರೋಪಿಗಾಗಿ ವಾರಂಟ್‌ ಜಾರಿ ಮಾಡಿದೆ..
ರುಸ್ತುಂ ಸಿಂಗ್‌ ಶೇಖರ್‌ ಎಂಬಾತನೇ ಐದು ಮದುವೆಯಾದಾತ.. ಈತ ನಾನಿನ್ನೂ ಮದುವೆಯಾಗಿಲ್ಲ ಎಂದು ಹೇಳಿಕೊಂಡು ಓಡಾಡುತ್ತಾನೆ.. ಯಾವುದಾದರೂ ಮಹಿಳೆ ಸಿಕ್ಕರೆ ಆಕೆಯ ಜೊತೆ ಮದುವೆಯಾಗಿ ವಂಚನೆ ಮಾಡಿ ಪರಾರಿಯಾಗುತ್ತಾನೆ.. ಹೀಗೆ ಐದು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.. ಆರೋಪಿ ರುಸ್ತುಂ ಸಿಂಗ್‌ 2018ರ ಮಾರ್ಚ್​ 13ರಂದು ಮೊದಲ ಮದುವೆಯಾಗಿದ್ದ ಎನ್ನಲಾಗಿದೆ. ಮದುವೆಯಾದ ಬಳಿಕ ಕೆಲಸ ಇದೆ ಎಂದು ಹೊರಗಡೆ ಹೋದವನು ಮತ್ತೆ ವಾಪಸ್‌ ಬಂದಿಲ್ಲ.. ಬದಲಾಗಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ..
ಇದೀಗ ಆರೋಪಿಯ ಮೊದಲ ಪತ್ನಿ ಗ್ವಾಲಿಯರ್ ಎಸ್ಪಿಗೆ ಬಂದು ದೂರು ನೀಡಿದ್ದಾಳೆ.

Share Post