BengaluruPolitics

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಘೋಷಿಸಿದ ಜನಾರ್ದನರೆಡ್ಡಿ

ಬೆಂಗಳೂರು; ಕೊಪ್ಪಳದಲ್ಲಿ ಮನೆ ಮಾಡಿ ಕುತೂಹಲ ಸೃಷ್ಟಿಸಿದ್ದ ಮಾಜಿ ಸಚಿವ ಜನಾರ್ದನರೆಡ್ಡಿಯವರು ನಿರೀಕ್ಷೆಯಂತೆ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಅದಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು ಹೊಸ ಪಕ್ಷವನ್ನು ಘೋಷಣೆ ಮಾಡಿದರು.

ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಹಣ ಸಂಪಾದನೆ ಪ್ರಕರಣಗಳಲ್ಲಿ ಜೈಲು ಸೇರಿದ  ಮೇಲೆ ಜನಾರ್ದನ ರೆಡ್ಡಿ, ರಾಜಕೀಯ ಮೂಲೆಗುಂಪಾಗಿದ್ದರು. ಬಿಜೆಪಿಯಿಂದಲೂ ಉಚ್ಛಾಟನೆ ಮಾಡಲಾಗಿತ್ತು. ಅನಂತರ ಅವರನ್ನು ಪಕ್ಷಕ್ಕೆ ವಾಪಸ್‌ ತೆಗೆದುಕೊಂಡಿರಲಿಲ್ಲ. ಹೀಗಾಗಿ ಕೊನೆಗೆ ಜನಾರ್ದನರೆಡ್ಡಿ ಸ್ವಂತ ಪಕ್ಷ ಕಟ್ಟೋ ನಿರ್ಧಾರ ಕೈಗೊಂಡಿದ್ದಾರೆ.

ಯಡಿಯೂರಪ್ಪ ಹಾಗೂ ಜಗದೀಶ್‌ ಶೆಟ್ಟರ್‌ ಅವರನ್ನು ಹಾಡಿ ಹೊಗಳಿದ ಜನಾರ್ದನರೆಡ್ಡಿ, ಹೊಸ ಪಕ್ಷ ಕಟ್ಟುವ ನಿರ್ಧಾರ ನನ್ನ ಸ್ವಂತದ್ದು ಎಂದು ಅವರು ಹೇಳಿದ್ದಾರೆ. ಇನ್ನು ಶ್ರೀರಾಮುಲು ಅವರನ್ನು ನಮ್ಮ ಮನೆ ಮಗನಂತೆ ನೋಡಿಕೊಂಡಿದ್ದೆವು. ನಮ್ಮ ಸ್ನೇಹ ಹಾಗೆಯೇ ಇರಲಿದೆ. ಆದ್ರೆ ಅವರನ್ನು ನಾನು ಹೊಸ ಪಕ್ಷಕ್ಕೆ ಬರುವಂತೆ ಆಹ್ವಾನಿಸಿಲ್ಲ. ಅದು ಸರಿಯೂ ಆಗುವುದಿಲ್ಲ ಎಂದು ಜನಾರ್ದನರೆಡ್ಡಿ ಹೇಳಿದ್ದಾರೆ.

Share Post