ದೇಶದಲ್ಲಿ ಬಿಜೆಪಿ ಕಳ್ಕೊಂಡಿದ್ದು ಕೇವಲ 0.7ರಷ್ಟು ಮತ; ಸೋತಿದ್ದು ಬರೋಬ್ಬರಿ 63 ಸ್ಥಾನಗಳು!
ನವದೆಹಲಿ; ಒಂದು ಸಣ್ಣ ವ್ಯತ್ಯಾಸ ದೊಡ್ಡ ನಷ್ಟಕ್ಕೆ ಕಾರಣವಾಗಿಬಿಡುತ್ತದೆ.. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವುದೂ ಅದೇ.. ಯಾಕಂದ್ರೆ ಕಳೆದ ಬಾರಿಗಿಂತ ಈ ಬಾರಿ ದೇಶದಲ್ಲಿ ಬಿಜೆಪಿ ಕೇವಲ 0.7ರಷ್ಟು ಮಾತ್ರ ಕಡಿಮೆ ಮತಗಳು ಗಳಿಸಿದೆ.. ಈ ಸಣ್ಣ ವ್ಯತ್ಯಾಸಕ್ಕಾಗಿ ಬಿಜೆಪಿ ಕಳೆದ ಬಾರಿಗಿಂತ 63 ಸ್ಥಾನಗಳನ್ನು ಕಡಿಮೆ ಗಳಿಸಿದೆ.. ಇದರಿಂದಾಗಿ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ..
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿ ಒಂದೇ 303 ಸ್ಥಾನಗಳಲ್ಲಿ ಗೆದ್ದಿತ್ತು.. ಈ ಮೂಲಕ ಬಿಜೆಪಿ ಒಂದು ಪಕ್ಷಕ್ಕೇ ಸ್ಪಷ್ಟ ಬಹುಮತ ಸಿಕ್ಕಂತಾಗಿತ್ತು.. ಆದ್ರೆ ಈ ಬಾರಿ ಬಿಜೆಪಿ ಪಕ್ಷ ಕೇವಲ 240 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.. ಅಂದರೆ ಸರಳ ಬಹುಮತಕ್ಕೆ ಬೇಕಾದ 272 ಸ್ಥಾನಗಳು ಕೂಡಾ ಬಿಜೆಪಿಗೆ ಸಿಕ್ಕಿಲ್ಲ.. ಇದರಿಂದಾಗಿ ಮಿತ್ರಪಕ್ಷಗಳ ನೆರವಿಲ್ಲದೆ ಬಿಜೆಪಿ ಸರ್ಕಾರ ರಚನೆ ಮಾಡೋದಕ್ಕೂ ಸಾಧ್ಯವಾಗುತ್ತಿಲ್ಲ.. ಹಾಗಂತ ಬಿಜೆಪಿ ಹೆಚ್ಚಿನ ಮತಗಳನ್ನೇನೋ ಕಳೆದುಕೊಂಡಿಲ್ಲ.. ಸಣ್ಣ ಪ್ರಮಾಣದಲ್ಲಿ ವ್ಯತ್ಯಾಸ ಆಗಿದ್ದಕ್ಕೇ ಬಿಜೆಪಿ ಕಳೆದ ಬಾರಿಗಿಂತ 63 ಸ್ಥಾನಗಳನ್ನು ಕಡಿಮೆ ಗಳಿಸುವಂತಾಗಿದೆ.. ಅಂದಹಾಗೆ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ಒಟ್ಟು ಶೇ.37.3ರಷ್ಟು ಮತಗಳನ್ನು ಗಳಿಸಿ, 303 ಸ್ಥಾಗಳಲ್ಲಿ ಗೆದ್ದಿತ್ತು.. ಈ ಬಾರಿಯ ಚುನಾವಣೆಯಲ್ಲಿ 36.56ರಷ್ಟು ಮತಗಳನ್ನು ಗಳಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ಕೇವಲ 0.7ರಷ್ಟು ಮತಗಳನ್ನು ಕಳೆದುಕೊಂಡಿದೆ.. ಆದ್ರೆ ಸೀಟುಗಳು ಮಾತ್ರ 63 ಸೀಟುಗಳನ್ನು ಕಳೆದುಕೊಂಡಿದೆ..
ಇನ್ನು ಇದೇ 2019ರಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ 19.5ರಷ್ಟು ಮತಗಳನ್ನು ಪಡೆದಿತ್ತು.. ಈ ವೇಳೆ ಕಾಂಗ್ರೆಸ್ ಗಳಿಸಿದ್ದದ್ದು 52 ಸ್ಥಾನಗಳು.. ಈ ಬಾರಿ ಕಾಂಗ್ರೆಸ್ ಶೇ.1.7ರಷ್ಟು ಮತಗಳನ್ನು ಹೆಚ್ಚಿಸಿಕೊಂಡು 21.2ರಷ್ಟು ಮತಗಳನ್ನು ಗಳಿಸಿದೆ.. ಆದ್ರೆ ಕಾಂಗ್ರೆಸ್ ಪಕ್ಷ ಕಳೆದ ಬಾರಿಗಿಂತ 47 ಸ್ಥಾನಗಳನ್ನು ಹೆಚ್ಚಿಗೆ ಗಳಿಸಿದೆ.. ಅಂದರೆ ಕಳೆದ ಬಾರಿ 52 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಈ ಬಾರಿ 99 ಸ್ಥಾನಗಳಲ್ಲಿ ಗೆದ್ದಿದೆ.. ಇದರ ಜೊತೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಸಂಸದರೊಬ್ಬರು ಈಗ ಕಾಂಗ್ರೆಸ್ ಸೇರಿದ್ದು, ಕಾಂಗ್ರೆಸ್ ಸದಸ್ಯಬಲ ನೂರಕ್ಕೇರಿದೆ..