Politics

ಲೋಕಸಭಾ ಸ್ಪೀಕರ್‌ ಆಗಿ ಓಂ ಬಿರ್ಲಾ ಮರು ಆಯ್ಕೆ

ನವದೆಹಲಿ; ಲೋಕಸಭೆಯ ಸ್ಪೀಕರ್‌ ಆಗಿ ಓಂ ಬಿರ್ಲಾ ಅವರು ಮರು ಆಯ್ಕೆಯಾಗಿದ್ದು, ಸತತ ಎರಡನೇ ಬಾರಿ ಲೋಕಸಭೆ ಸ್ಪೀಕರ್‌ ಹುದ್ದೆಗೇರಿದ್ದಾರೆ.. ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರೆ, ವಿರೋಧ ಪಕ್ಷದ ಸದಸ್ಯರು ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಎನ್​ಡಿಎ ಮೈತ್ರಿಕೂಟದ ಎಲ್ಲ ಸದಸ್ಯರು ಓಂ ಬಿರ್ಲಾ ಹೆಸರನ್ನು ಅನುಮೋದಿಸಿದ್ದರಿಂದ ಅವರೇ ಆಯ್ಕೆಯಾದರು.
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬಿರ್ಲಾ ಹೆಸರನ್ನೇ ಸೂಚಿಸಿದರು. ಹಂಗಾಮಿ ಸ್ಪೀಕರ್ ಭರ್ತೃಹರಿ ಮೆಹತಾಬ್ ಅವರು ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿಮತ ಮೂಲಕ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿತು. ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಭರ್ತೃಹರಿ ಮೆಹತಾಬ್ ಅವರು ಘೋಷಣೆ ಮಾಡಿದರು.

Share Post