Bengaluru

ಇವತ್ತು ಸಂಜೆ ವೇಳೆಗೆ ಭಾರಿ ಮಳೆ ಸಾಧ್ಯತೆ; ಬೇಗ ಮನೆ ಸೇರಿಕೊಳ್ಳಿ..

ಬೆಂಗಳೂರು; ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿ ಹಲವೆಡೆ ಮಳೆ ಅಬ್ಬರಿಸುತ್ತಿದೆ.. ಬೆಂಗಳೂರಲ್ಲಂತೂ ಕೆಲ ದಿನಗಳಿಂದ ದಿನವೂ ಮಳೆಯಾಗುತ್ತಿದೆ.. ಅದ್ರಲ್ಲೂ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ನಾಗರಿಕರು ತತ್ತರಿಸಿದ್ದಾರೆ.. ಇನ್ನೂ ಏಳು ದಿನ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಹೇಳುತ್ತಿದೆ.. ಅಷ್ಟೇ ಅಲ್ಲ, ಇಂದು ಸಂಜೆಯ ವೇಳೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.. ಹೀಗಾಗಿ ಕೆಲಸದ ಮೇಲೆ ಹೊರಗೆ ಹೋಗಿರುವವರು ಬೇಗ ಮನೆ ಸೇರಿಕೊಳ್ಳುವುದು ಒಳ್ಳೆಯದು..

ಇಂದು ಬೆಂಗಳೂರಿನಲ್ಲಿ ಸಂಜೆಯವರೆಗೂ ಮೋಡ ಕವಿದ ವಾತಾವರಣವಿರುತ್ತದೆ.. ಜೊತೆ ತುಂತುರು ಮಳೆಯಾಗಲಿದೆ.. ಸಂಜೆಯ ವೇಳೆಗೆ ಭಾರೀ ಮಳೆಯಾಗಲಿದೆ ಎಂದು ತಿಳಿದುಬಂದಿದೆ.. ವಾತಾವರಣವೂ ತಂಪಾಗಿರಲಿದ್ದು, ಇದರಿಂದಾಗಿ ಜನರು ಶೀತ, ಕೆಮ್ಮು ಮುಂತಾದ ಸಮಸ್ಯೆಗಳು ಎದುರಿಸುವ ಸಾಧ್ಯತೆ ಇದೆ.. ,

ಇನ್ನು ರಾಜ್ಯದ ಹಲವೆಡೆ ಅದರಲ್ಲೂ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ.. ಇನ್ನೂ ಏಳು ದಿನ ಮಳೆಯಾಗಲಿದ್ದು, ಕರಾವಳಿ ಭಾಗದ ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ..

 

Share Post