CrimeNationalPolitics

ನಕಲಿ ದಾಖಲೆ ತೋರಿಸಿ ಸಂಸತ್‌ ಪ್ರವೇಶಕ್ಕೆ ಯತ್ನ; ಮೂವರ ಅರೆಸ್ಟ್‌!

ನವದೆಹಲಿ; ವರ್ಷದ ಹಿಂದೆ ಮೈಸೂರಿನ ಯುವಕ ಸೇರಿ ಆರು ಮಂದಿ ಸಂಸತ್ತಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ರಾದ್ಧಾಂತ ಸೃಷ್ಟಿಸಿದ್ದನ್ನು ಜನ ಇನ್ನೂ ಮರೆತಿಲ್ಲ.. ಹೀಗಿರುವಾಗಲೇ ನಕಲಿ ಆಧಾರ್‌ ಕಾರ್ಡ್‌ ತೋರಿಸಿ ಸಂಸತ್‌ ಕಟ್ಟಡ ಪ್ರವೇಶ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.. ಸಿಐಎಸ್‌ಎಫ್‌ ಯೋಧರು, ಶೋಯೆಬ್‌, ಖಾಸಿ ಹಾಗೂ ಮೋನಿಸ್‌ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ..

ಉತ್ತರ ಪ್ರದೇಶದ ಹಾಪುರ್‌ ನಿವಾಸಿ ಎಂದು ಹೇಳಿಕೊಂಡು ಶೋಯೆಬ್‌ ನಕಲಿ ಗುರುತಿನ ಚೀಟು ತೋರಿಸಿ ಸಂಸತ್‌ ಕಟ್ಟಡ ಪ್ರವೇಶಕ್ಕೆ ಮುಂದಾಗಿದ್ದ.. ಈತನ ಜೊತೆಗೆ ಇನ್ನೂ ಇಬ್ಬರಿದ್ದರು.. ಮೂವರನ್ನೂ ಯೋಧರು ಬಂಧಿಸಿದ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.. ಅವರು ಯಾಕೆ ನಕಲಿ ಗುರುತಿನ ಚೀಟಿ ತೋರಿಸಿದ್ದರು ಎಂಬುದ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ..

419, 465,468, 120ಬಿ ಸೆಕ್ಷನ್​ ಅಡಿಯಲ್ಲಿ ಮೂವರ ವಿರುದ್ಧವೂ ಕೇಸ್‌ ದಾಖಲು ಮಾಡಿಕೊಳ್ಳಲಾಗಿದೆ.. ಜೊತೆಗೆ ಅವರ ಬಳಿ ಇದ್ದ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ..

Share Post