ಮೋದಿ ನಾಲಾಯಕ್ ಎಂದ ಪ್ರಿಯಾಂಕ್ ಖರ್ಗೆ; ಯಾಕೆ ಹೇಳಿದ್ದು ಗೊತ್ತಾ..?
ಕಲಬುರಗಿ; ಪ್ರಧಾನಿ ನರೇಂದ್ರ ಮೋದಿಯವರು ನಾಲಾಯಕ್ ಎಂದು ಎಐಸಿಸಿ ಅಧ್ಯಕ್ಷ ಖರ್ಗೆ ಪುತ್ರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಜರಿದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ದರೆ ದೇಶ ನಡೆಸುವುದಲ್ಲ, ಮನೆಯೂ ಕೂಡಾ ಸರಿಯಾಗಿ ನಡೆಯೋದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಮಳಖೇಡಕ್ಕೆ ಬಂದಿದ್ದರು. ಈ ವೇಳೆ ನಿಮ್ಮ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಎಂದು ಬಂಜಾರಾ ಸಮುದಾದಯವರಿ ಹೇಳಿಹೋಗಿದ್ದರು. ಆದ್ರೆ ಇಂದು ಅದೇ ಬಂಜಾರಾ ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಇಂತಹ ಮಗನಿದ್ದರೆ ಇನ್ನೇನು ಆಗುತ್ತದೆ ಎಂದು ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಕಾಂಗ್ರೆಸ್ 91 ಬಾರಿ ನನ್ನನ್ನು ನಿಂದಿಸಿದೆ ಎಂದು ಹೇಳುತ್ತಾರೆ. ಅದಕ್ಕೆ ಅವರಿಗೆ ಸಮಯವಿರುತ್ತದೆ. ಆದ್ರೆ, ನಲವತ್ತು ಪರ್ಸೆಂಟ್ ಕಮೀಷನ್ ಬಗ್ಗೆ ಗುತ್ತಿಗೆದಾರರು ಬರೆದ ಪತ್ರಕ್ಕೆ ಉತ್ತರ ಕೊಡೋದಕ್ಕೆ ಆಗೋದಿಲ್ಲ ಅವರಿಗೆ ಎಂದು ಪ್ರಿಯಾಂಕ್ ಕಿಡಿಕಾರಿದ್ದಾರೆ.