DistrictsNational

ಯುವತಿಯನ್ನು 12 ಕಿಮೀ ಎಳೆದೊಯ್ದ ಕಾರು..!

ನವದೆಹಲಿ; ದೆಹಲಿಯಲ್ಲಿ ನಡೆದ ಅಪಘಾತವೊಂದರಲ್ಲಿ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ್ದಾಳೆ. ಯುವತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದ್ದು, ಕಾರು ಆಕೆಯನ್ನು 12 ಕಿಲೋ ಮೀಟರ್‌ವರೆಗೂ ಎಳೆದೊಯ್ದಿದೆ.

ದೆಹಲಿಯ  ಅಮನ್ ವಿಹಾರ್ ನಿವಾಸಿ ಅಂಜಲಿ (20) ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ.  ಅಂಜಲಿ ಪ್ರಯಾಣಿಸುತ್ತಿದ್ದ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರಕ್ಕೆ ಆಕೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಆದರೂ ಕಾರು 10-12 ಕಿ.ಮೀ ದೂರ ಕ್ರಮಿಸಿದೆ.

 

Share Post