CrimeNational

ರಾಜಸ್ತಾನದಲ್ಲಿ ಭೀಕರ ಅಪಘಾತ; ಎಂಟು ಮಂದಿ ಮರಣ

ಜೈಪುರ; ರಾಜಸ್ಥಾನದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಿಕಾರ್‌ನ ಪಲ್ಸಾನಾ ರಸ್ತೆಯಲ್ಲಿ ಈ ದುರಂತ ನಡೆದಿದೆ. ಮೋಟಾರ್‌ಸೈಕಲ್ ಮತ್ತು ಟ್ರಕ್‌ಗೆ ಪಿಕಪ್ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ.

14 ಪ್ರಯಾಣಿಕರಿದ್ದ ಪಿಕಪ್ ಟ್ರಕ್‌ ತನಗೆ ಎದುರು ಬರ್ತಿದ್ದ ಟ್ರಕ್ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಐವರು ಪುರುಷರು ಮತ್ತು ಮೂವರು ಹೆಣ್ಣುಮಕ್ಕಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

 

Share Post