National

ಸದನದಲ್ಲಿ ನಾಗಾಲ್ಯಾಂಡ್‌ ನಾಗರಿಕರ ಹತ್ಯೆ ಸದ್ದು; ಸಂಸತ್‌ ಕಲಾಪ ಮುಂದೂಡಿಕೆ

ನವದೆಹಲಿ: ಬಂಡುಕೋರರ ಮೇಲೆ ದಾಳಿ ನಡೆಸುವ ವೇಳೆ ನಾಗಾಲ್ಯಾಂಡ್‌ನ 13 ನಾಗರಿಕರನ್ನು ಸೇವೆ ಹತ್ಯೆ ಮಾಡಿರುವುದಕ್ಕೆ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಆಕ್ರೋಶ ವ್ಯಕ್ತಪಡಿಸಿವೆ. ನಾಗಾಲ್ಯಾಂಡ್‌ ಜನ ಸೇನಾ ಸಿಬ್ಬಂದಿ ಅಂದರೆ ಭಯಪಡುತ್ತಿದ್ದಾರೆ. ನಾಗರಿಕ ಹತ್ಯೆ ಕುರಿತು ಗೃಹ ಸಚಿವ ಅಮಿತ್‌ ಷಾ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಇದ್ರಿಂದಾಗಿ ಎರಡೂ ಸದನಗಳಲ್ಲಿ ಗದ್ದಲ ಉಂಟಾಗಿದ್ದು, ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ಲೋಕಸಭೆ ಕಲಾಪವನ್ನೂ ಕೆಲಕಾಲ ಮುಂದೂಡಲಾಗಿತ್ತು. ಅನಂತರ ಕಲಾಪ ಶುರುವಾಗಿದ್ದು, ನಾಗಾಲ್ಯಾಂಡ್‌ ಘಟನೆ ಬಗ್ಗೆ ಚರ್ಚೆ ನಡೆಯುತ್ತಿದೆ.

ನಿನ್ನೆ ಸೇನಾ ಸಿಬ್ಬಂದಿ ಟ್ರಕ್‌ ಒಂದರಲ್ಲಿ ನಾಗಾಲ್ಯಾಂಡ್‌ ಬಂಡುಕೋರರು ಹೋಗುತ್ತಿದ್ದಾಗ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆ ವೇಳೆ ಯೋಧರು ನಾಗರಿಕರ ಮೇಲೂ ಗುಂಡಿನ ದಾಳಿ ನಡೆಸಿದ್ದು, 13 ನಾಗರಿಕರು ಬಲಿಯಾಗಿದ್ದರು.

Share Post