National

ಏನಿದು ಮಹಿಳಾ ಮೀಸಲಾತಿ ಮಸೂದೆ..?; ಅಂಗೀಕಾರಕ್ಕೆ ಯಾಕಿಷ್ಟು ಅಡ್ಡಿ..?

ನವದೆಹಲಿ; ಲೋಕಸಭಾ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿಗೆ ಮಸೂದೆಗೆ ನಿನ್ನೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.  ಇನ್ನು ಸಂಸತ್ತಿನಲ್ಲಿ ಈ ಮಸೂದೆ ಮಂಡನೆಯಾಗಬೇಕಿದೆ. ವಿಶೇಷ ಅಧಿವೇಶನದಲ್ಲೇ ಈ ಮಸೂದೆ ಮಂಡನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಬಿಜೆಪಿ ನೇತೃತ್ವದ ಸರ್ಕಾರ ಬಹುಮತ ಇರುವುದರಿಂದ ಈ ಮಸೂದೆ ಮಂಡನೆಯಾದರೆ ಅಂಗೀಕಾರ ಆಗುವುದು ನಿಶ್ಚಿತ.

ಏನಿದು ಮಹಿಳಾ ಮೀಸಲಾತಿ ಮಸೂದೆ..?

1989 ರಲ್ಲಿ, ಭಾರತದ ಆಗಿನ ರಾಜೀವ್ ಗಾಂಧಿ ಅವರು ಈ ಮಸೂದೆಯನ್ನು ಸಂಸತ್ತಿನಲ್ಲಿ ಮೊದಲ ಬಾರಿಗೆ ಮಂಡಿಸಿದರು. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಆದ್ರೆ ಅದಕ್ಕೆ ಆಗ ಅಂಗೀಕಾರ ಸಿಗಲಿಲ್ಲ. ನಂತರ 1992 ಮತ್ತು 1993 ರ ನಡುವೆ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು 72 ಮತ್ತು 73 ಎಂಬ ಎರಡು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಮಂಡಿಸಿದರು. ಈ ವಿಧೇಯಕಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಇದರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಯಿತು.

ಇನ್ನು 1996ರ ಸೆಪ್ಟೆಂಬರ್‌ನಲ್ಲಿ ಅಂದಿನ ಪ್ರಧಾನಿ ದೇವೇಗೌಡರ ಮೈತ್ರಿಕೂಟವು 81ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು. ಆದರೆ ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ಸಿಗಲಿಲ್ಲ.

1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಮಸೂದೆಯನ್ನು ಮತ್ತೊಮ್ಮೆ ಮಂಡಿಸಲು ಅವರು ಬಯಸಿದ್ದರು. ಆಗಲೂ ಈ ಮಸೂದೆಗೆ ಅಂಗೀಕಾರ. ಅದೇ ರೀತಿ 1999, 2002 ಮತ್ತು 2003ರಲ್ಲಿ ವಾಜಪೇಯಿ ಅವರು ಈ ಮಸೂದೆಯನ್ನು ಮಂಡಿಸಲು ಯತ್ನಿಸಿ ವಿಫಲರಾಗಿದ್ದರು. ಐದು ವರ್ಷಗಳ ನಂತರ ಮನಮೋಹನ್ ಸಿಂಗ್ ಪ್ರಧಾನಿಯಾದರು. ಅವರು 2008 ರಲ್ಲಿ ಈ ಮಸೂದೆಯನ್ನು ಮಂಡಿಸಿದರು. ಸುದೀರ್ಘ ಚರ್ಚೆಯ ನಂತರ 2010ರಲ್ಲಿ ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಈ ಮಸೂದೆಗೆ ಅಂಗೀಕಾರ ಸಿಗಲಿಲ್ಲ. 2014ರಲ್ಲಿ ಈ ಮಸೂದೆ ವಿಫಲವಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಯಾವುದೇ ಮಸೂದೆ ಅಂಗೀಕಾರವಾದರೆ ಅದು ಕ್ರಿಯಾಶೀಲವಾತ್ತದೆ.

Share Post