National

ಹಳೆ ಸಂಸತ್‌ ಭವನದಲ್ಲಿ ಪ್ರಧಾನಿ, ಸಂಸದರ ಫೋಟೋ ಶೂಟ್‌

ದೆಹಲಿ; ಇಂದಿನಿಂದ ಸಂಸತ್‌ ಅಧಿವೇಶನ ಹೊಸ ಕಟ್ಟಡಕ್ಕೆ ಬದಲಾಗಿದೆ. ಇಂದಿನಿಂದ ಸಂಸತ್ತಿನ ವ್ಯವಹಾರಗಳು ಹೊಸ ಕಟ್ಟಡದಲ್ಲೇ ನೆರವೇರಲಿವೆ. ಈ ಹಿನ್ನೆಲೆಯಲ್ಲಿ ಹಳೆಯ ಕಟ್ಟಡದ ನೆನಪಿಗಾಗಿ ಇಂದು ಫೋಟೋಶೂಟ್‌ ಏರ್ಪಡಿಸಲಾಗಿತ್ತು. ಎಲ್ಲಾ ಸಂಸದರು, ಪ್ರಧಾನಿ, ಉಪರಾಷ್ಟ್ರಪತಿ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದರು.
ರಾಜ್ಯಸಭೆ ಮತ್ತು ಲೋಕಸಭೆಯ 750 ಸದಸ್ಯರು ಪೋಟೋಶೂಟ್ ನಲ್ಲಿ ಪಾಲ್ಗೊಂಡಿದ್ದರು. ಮುಂಭಾಗದಲ್ಲಿ ಪ್ರಧಾನಿ ಮೋದಿ, ಅವರ ಬಲಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಡಭಾಗದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂತಿದ್ದರು. ಅವರ ಮುಂದಿನ ಸಾಲಿನಲ್ಲಿ ಕೆಲ ಸಂಸದರು ಕೂತಿದ್ದರು. ಉಳಿದಂತೆ ಎಲ್ಲಾ ಸಂಸದರೂ ಹಿಂಬದಿಯಲ್ಲಿ ನಿಂತಿದ್ದರು.
ರಾಜ್ಯಸಭೆ ಹಾಗೂ ಲೋಕಸಭೆಯ ಎಲ್ಲಾ ಸಂಸದರನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿಯಲಾಯಿತು.

Share Post