LifestyleNational

ಎಂಥಾ ಸರ್ಕಸ್?; ರೈಲು ಹೀಗೂ ಹತ್ತಬಹುದೇ?

ಮುಂಬೈ; ಕರ್ನಾಟಕದಲ್ಲಿ ಮಹಿಳೆಯರಿಗೆ ಬಸ್ ಫ್ರೀ ಮಾಡಿದಾಗ ಸೀಟಿಗಾಗಿ ಕಿಟಕಿಯಲ್ಲಿ ತೂರುತ್ತಿದ್ದ ದೃಶ್ಯಗಳನ್ನು ನೋಡಿದ್ದೇವೆ.. ಇದೀಗ ರೈಲು ಸರದಿ..  ವ್ಯಕ್ತಿಯೊಬ್ಬ ಒಬ್ಬ ಹುಡುಗ ಮತ್ತು ಮಹಿಳೆಯನ್ನು ರೈಲಿನ ಎಮರ್ಜೆನ್ಸಿ ಎಕ್ಸಿಟ್​ ಕಿಟಕಿ ಮೂಲಕ ಹತ್ತಿಸಿದ್ದಾನೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

    ವೈರಲ್​ ವಿಡಿಯೋವನ್ನು @BewithTamanna ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.. ಇದು ಮುಂಬೈ ರೈಲು ನಿಲ್ದಾಣದ ದೃಶ್ಯ ಎಂದು ಹೇಳಲಾಗುತ್ತಿದೆ.. ನಿಂತಿದ್ದ ರೈಲಿಗೆ ಹತ್ತಲು ಜನ ಪ್ರಯತ್ನಿಸುತ್ತಿರುತ್ತಾರೆ.. ಈ ವೇಳೆ ವ್ಯಕ್ತಿಯೊಬ್ಬ ಬಾಲಕನನ್ನು ತುರ್ತು ಕಿಟಕಿಯ ಮೂಲಕ ರೈಲಿನೊಳಗೆ ತಳ್ಳಿದ್ದಾನೆ. ಬಳಿಕ ಅಲ್ಲಿಯೇ ನಿಂತಿದ್ದ ಮಹಿಳೆಯನ್ನು ಎತ್ತಿಕೊಂಡು ರೈಲಿನೊಳಗೆ ನೂಕಿದ್ದಾನೆ.

Share Post