ವಯನಾಡು ಸಂತ್ರಸ್ತರ ನೆರವಿಗೆ ನಾವಿದ್ದೇವೆ; ಪ್ರಧಾನಿ ಮೋದಿ
ನವದೆಹಲಿ; ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾಂತ್ರ್ಯ ಪ್ರೇಮಿಗಳಿಗೆ ಗೌರವ ಕೊಡುವ ದಿನವಿದು.. ಭಾರತ ಅವರಿಗೆ ಋಣಿಯಾಗಿದೆ.. ಅಂದು 40 ಕೋಟಿ ಜನಸಂಖ್ಯೆ ಇತ್ತು. ಈಗ 140 ಕೋಟಿ ಆಗಿದ್ದೇವೆ. ದೃಢ ಸಂಕಲ್ಪ ನಮ್ಮಲ್ಲಿದ್ದರೆ ಯಾವುದೇ ಸವಾಲನ್ನೂ ಮೆಟ್ಟಿ ನಿಲ್ಲಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು..
ಇದನ್ನೂ ಓದಿ; ಪ್ರೀತಿಗೆ ಒಪ್ಪದ ಪೋಷಕರು; ಯುವಕ ಆತ್ಮಹತ್ಯೆ, ಯುವತಿ ಆಸ್ಪತ್ರೆಗೆ!
ಪ್ರಧಾನಿ ನರೇಂದ್ರ ಮೋದಿಯವರು ಜವಹರಲಾಲ್ ನೆಹರೂ ಹಾಗು ಇಂದಿರಾಗಾಂಧಿ ಬಳಿಕ ಸತತ 11 ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.. ಇನ್ನು ವಯನಾಡು ಪ್ರವಾಹದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸಂತ್ರಸ್ತರ ನೆರವಿಗೆ ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಮುಳಬಾಗಿಲಿನಲ್ಲಿ ಶಿಕ್ಷಕಿಯ ಬರ್ಬರ ಹತ್ಯೆ!; ಕಾರಣ ಏನು..?