National

ಪಳವಳ್ಳಿ ಬಸ್‌ ದುರಂತ ಪ್ರಕರಣ: ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ ಉಪ ರಾಷ್ಟ್ರಪತಿ

ದೆಹಲಿ: ಇಂದು ಸಾವಿನ ಶನಿವಾರವಾಗಿದೆ. ಬೆಳಗ್ಗೆ ಖುಷಿ ಖುಷಿಯಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಕೆಲಸದ ನಿಮಿತ್ತ ತೆರಳುತ್ತಿದ್ದ ಜನ, ಊರುಗಳಿಗೆ ಹೋಗ್ತಿದ್ದ ಪ್ರಯಾಣಿಕರಿಗೆ ವಿಧಿ ತಮ್ಮ ಬದುಕಲ್ಲಿ ಹೀಗೆ ಕ್ರೂರವಾಗಿ ನಡೆಸಿಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೆಚ್ಚಿನ ಜನರನ್ನು ಹೊತ್ತಿದ್ದ ಖಾಸಗಿ ಬಸ್‌ ತಿರುವಿನಲ್ಲಿ ಉರುಳಿಬಿದ್ದು ಅಮಾಯಕರ ಪ್ರಾಣವನ್ನು ಬಲಿತೆಗೆದುಕೊಂಡಿದೆ.

ಈ ದುಋಮತ ಪ್ರಕರಣದ ಬಗ್ಗೆ ಉಪರಾಷ್ಟ್ರಪತಿ ತೀವ್ರ ಸಂತಾಪ ಸೂಚಿಸಿದ್ದಾರೆ. ಟ್ವೀಟ್‌ ಮೂಲಕ ಸಾವನ್ನಪ್ಪಿದವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಕರ್ನಾಟಕದ ತುಮಕೂರಿನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಜೀವಹಾನಿಯಾದ ಬಗ್ಗೆ ಕೇಳಿ ತೀವ್ರ ನೋವಾಗಿದೆ. ಅಗಲಿದ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

Share Post