ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ಸಲ್ಲಿಸಿದ ಕಾಂಗ್ರೆಸ್, ಬಿಆರ್‌ಎಸ್
ನವದೆಹಲಿ; ಮಣಿಪುರ ಗಲಭೆ ವಿಚಾರವಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ಸಲ್ಲಿಸಲಾಗಿದೆ. ಕಾಂಗ್ರೆಸ್ ಹಾಗೂ ಭಾರತ್ ರಾಷ್ಟ್ರ ಸಮಿತಿ ವತಿಯಿಂದ ಲೋಕಸಭಾ ಪ್ರಧಾನ ಕಾರ್ಯದರ್ಶಿ ಕಚೇರಿಗೆ ವಿಶ್ವಾಸ ನಿರ್ಣಯ ನೋಟಿಸ್ ನೀಡಲಾಗಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರು ಈ ನೋಟಿಸ್ ನೀಡಿದ್ದಾರೆ. ಇನ್ನೊಂದೆಡೆ ಬಿಆರ್‌ಎಸ್ ಪಾರ್ಟಿ ಕೂಡಾ ಪತ್ಯೇಕ ನೋಟಿಸ್ ನೀಡಿದೆ. ಈ ನಿರ್ಣಯವನ್ನು ಸ್ಪೀಕರ್ ಸದನದಲ್ಲಿ ಓದಲಿದ್ದ, ಬಳಿಕ ಮತಕ್ಕೆ ಹಾಕಲಾಗುತ್ತದೆ. ಅಂದಹಾಗೆ ಮೋದಿ ಸರ್ಕಾರಕ್ಕೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಯಾಕಂದ್ರೆ ಎನ್‌ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. ಈ ಒಕ್ಕೂಟ ಸುಮಾರು 332 ಸದಸ್ಯಬಲ ಹೊಂದಿದ್ದರೆ, ಇಂಡಿಯಾ ಒಕ್ಕೂಟ ಕೇವಲ 144 ಸದಸ್ಯ ಬಲ ಮಾತ್ರ ಹೊಂದಿದೆ.