ರಷ್ಯಾ ದುರಾಕ್ರರಮಣವನ್ನು ನಿಲ್ಲಿಸುವಂತೆ ಮನವಿ-ಮೋದಿಗೆ ಉಕ್ರೇನ್ ಅಧ್ಯಕ್ಷ ಕರೆ
ದೆಹಲಿ: ರಷ್ಯಾ ಉಕ್ರೇನ್ ಮೇಲೆ ಹಿಡಿತ ಸಾಧಿಸಲು ಯುದ್ಧವನ್ನು ನಡೆಸುತ್ತಿದೆ. ಬಾಂಬ್, ಕ್ಷಿಪಣಿಗಳ ಮೂಲಕ ಈಗಾಗಲೇ ಉಕ್ರೇನ್ನಲ್ಲಿ ರಣಾಂಗಣ ಸೃಷ್ಟಿ ಮಾಡಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ಪ್ರಧಾನಿ ಮೋದಿಗೆ ಕರೆ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ರಷ್ಯಾ ಆಕ್ರಮಣವನ್ನು ಕೊನೆಗೊಳಿಸುವಂತೆ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ರಷ್ಯಾದ ಸೈನಿಕರು ತಮ್ಮ ದೇಶಕ್ಕೆ ನುಸುಳಿದ್ದಾರೆ ಎಂದು ಮಾಹಿತಿ ನೀಡಿದ್ರು. ರಷ್ಯಾದ ಆಕ್ರಮಣದ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಮ್ಮ ದೇಶವನ್ನು ಬೆಂಬಲಿಸುವಂತೆ ಉಕ್ರೇನ್ ಅಧ್ಯಕ್ಷ ಮೋದಿಯನ್ನು ಮನವಿ ಮಾಡಿದ್ದಾರೆ. ಉಕ್ರೇನ್ನಲ್ಲಿನ ಪ್ರಸ್ತುತ ಯುದ್ಧದ ಪರಿಸ್ಥಿತಿಯ ಬಗ್ಗೆ ಮೋದಿಗೆ ವಿವರಿಸುತ್ತಾ ಮನೆಗಳ ಮೇಲೆ ಗುಂಡು ಹಾರಿಸುತ್ತಿದ್ದಾರೆ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ರು. ಭದ್ರತಾ ಮಂಡಳಿಯಲ್ಲಿ ತಮ್ಮ ದೇಶಕ್ಕೆ ಬೆಂಬಲ ಸೂಚಿಸುವಂತೆ ಕರೆ ನೀಡಿದರು.
ಈ ನಡುವೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ನೆರವು ನೀಡಲು ಮುಂದಾಗಿವೆ. ಜೆಕ್ ರಿಪಬ್ಲಿಕ್ ಕೂಡ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮುಂದಾಗಿದೆ. ಬ್ರಿಟನ್ ಕೂಡಾ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದಾಗಿ ಹೇಳಿದೆ. ಇನ್ನೂ 20 ದೇಶಗಳು ಉಕ್ರೇನ್ಗೆ ನೆರವು ನೀಡಲು ಸಿದ್ಧ ಎಂದು ಘೋಷಿಸಿವೆ. ಉಕ್ರೇನ್ ಪರವಾಗಿ ರಷ್ಯಾದ ವಿರುದ್ಧದ ಯುದ್ಧದಲ್ಲಿ ಈ ದೇಶಗಳು ನೇರವಾಗಿ ಭಾಗಿಯಾಗದಿದ್ದರೂ ಪರೋಕ್ಷವಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸಲು ಮುಂದೆ ಬಂದಿವೆ.