National

ಸೋನು ಸೂದ್‌ ಸಹೋದರಿಗೆ ಪರಾಜಯ-ಆಪ್‌ ಅಭ್ಯರ್ಥಿ ವಿರುದ್ಧ ಹೀನಾಯ ಸೋಲು

ಪಂಜಾಬ್:‌ ಒಟ್ಟು 117 ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಎಎಪಿ ಏಕಾಂಗಿಯಾಗಿ 91 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಕೇವಲ 19 ಸ್ಥಾನಗಳಿಗೆ ಸೀಮಿತವಾಗಿದೆ. ಹೀಗೆ ಸೋತವರಲ್ಲಿ ಜನಪ್ರಿಯ ಚಲನಚಿತ್ರ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಕೂಡ ಇದ್ದಾರೆ. ಅವರು ಕಾಂಗ್ರೆಸ್‌ ಪಕ್ಷದಿಂದ ಮೋಗಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಎಎಪಿ ಅಭ್ಯರ್ಥಿ ಡಾ.ಅಮನ್ ದೀಪ್ ಕೌರ್ ಅರೋರಾ ಅವರ ವಿರುದ್ಧ ಸೋಲನ್ನುಂಡಿದ್ದಾರೆ. ಅಮನದೀಪ್ 58,813 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮಾಳವಿಕಾ 38 ಸಾವಿರದ 125 ಮತ ಪಡೆದು ಸೋಲನ್ನುನುಭವಿಸಿದ್ದಾರೆ.

ಕರೋನಾ ಅವಧಿಯಲ್ಲಿ ಸೋನು ಸೂದ್ ಅವರು ಸಲ್ಲಿಸಿದ ಸೇವೆಗಳನ್ನು ಎಲ್ಲರೂ ಸ್ಮರಿಸುತ್ತಾರೆ. ಸೋನು ಸೂದ್ ಸಹೋದರಿ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪಂಜಾಬ್ ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ್ರು. ತಂಗಿಯ ರಾಜಕೀಯ ವಿಚಾರದಲ್ಲಿ ನನಗೇನು ಸಂಬಂಧವಿಲ್ಲ ಎಂದು ಸೋನು ಸೂದ್‌ ಈ ಮೊದಲೇ ಹೇಳಿದ್ರು. ಮೊಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಮಾಳವಿಕಾ ಅಸಾಧಾರಣವಾಗಿ ಆರಂಭದಿಂದಲೇ ಹಿಂದುಳಿದಿದ್ರು. ಇದೀಗ ಸೋಲನ್ನು ಕೂಡ ಒಪ್ಪಿಕೊಳ್ಳಬೇಕಾಗಿದೆ.

ಕಾಂಗ್ರೆಸ್ ಜೊತೆಗೆ ಬಿಜೆಪಿ ಕೂಡಾ ಪಂಜಾಬ್‌ನಲ್ಲಿ ಮಕಾಡೆ ಮಲಗಿದೆ. ಪಂಜಾಬ್ ರಾಜ್ಯದಲ್ಲಿ ಎಎಪಿ ಏಕಪಕ್ಷೀಯವಾಗಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದೆ. ದೆಹಲಿಯ ಅಭಿವೃದ್ಧಿ ನೋಡಿ.. ಇಲ್ಲೂ ಅದನ್ನೇ ಪುನರಾವರ್ತನೆ ಮಾಡುತ್ತೇವೆ ಎಂದು ಸದ್ದಿಲ್ಲದೆ ಪ್ರಚಾರ ಮಾಡಿ ಕೊನೆಗೂ ಅಧಿಕಾರ ಗಿಟ್ಟಿಸಿಕೊಂಡಿದೆ.  ಪಂಜಾಬ್ ನಲ್ಲಿ ಕಾಂಗ್ರೆಸ್ ತನ್ನನ್ನು ತಾನು ಛಿದ್ರ ಮಾಡುವ ಹುನ್ನಾರದಲ್ಲಿದ್ದರೆ.. ದಿಲ್ಲಿಯಲ್ಲಿ ಕೇಜ್ರಿವಾಲ್ ಆಡಳಿತವನ್ನು ಮಾದರಿಯಾಗಿ ತೋರಿಸಿ ಆಮ್ ಆದ್ಮಿ ಪಕ್ಷ ಪಂಜಾಬ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Share Post