National

ಸಾಬರಮತಿ ಆಶ್ರಮದಲ್ಲಿ ಗಾಂಧಿ ಚರಕ ತಿರುಗಿಸಿದ ಬ್ರಿಟನ್‌ ಪ್ರಧಾನಿ

ಅಹಮದಾಬಾದ್‌; ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸಸ್‌ ಭಾರತ ಭೇಟಿಗೆ ಬಂದಿದ್ದು, ಗುಜರಾತ್‌ನ ಅಹಮದಾಬಾದ್‌ಗೆ ಬಂದಿದ್ದಾರೆ. ಎರಡು ದಿನಗಳ ಭಾರತ ಭೇಧಟಿಗೆ ಬಂದಿರುವ ಅವರು ಮೊದಲಿಗೆ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಅವರು ಆಶ್ರಮದಲ್ಲಿದ್ದ ಚರಕದಿಂದ ನೂಲು ತೆಗೆಯುವ ಪ್ರಯತ್ನ ಮಾಡಿದರು.

ಈ ವೇಳೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಹಾಜರಿದ್ದರು. ಬ್ರಿಟಿಷ್‌ ರೇರ್‌ ಅಡ್ಮಿರಲ್‌ ಸರ್ ಎಡ್ಮಂಡ್‌ ಸ್ಲೇಡ್‌ ಅವರ ಮಗಳು ಮೀರಾಬೆನ್‌ ಅವರ ಆತ್ಮಕಥನ ‘ದಿ ಸ್ಪಿರಿಟ್ಸ್‌ ಪಿಲಿಗ್ರಿಮೇಜ್‌’ (The Spirit’s Pilgrimage) ಪ್ರತಿಯನ್ನು ಸಾಬರಮತಿ ಆಶ್ರಮದ ಕಡೆಯಿಂದ ಬೋರಿಸ್‌ ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ಮೀರಾಬೆಲ್‌ ಗಾಂಧೀಜಿ ಅವರ ಅನುಯಾಯಿಯಾಗಿದ್ದರು. ಪ್ರಧಾನಿಯಾದ ಮೇಲೆ ಬೋರಿಸ್‌ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದಾರೆ.

Share Post