National

೭ ವರ್ಷದ ಬಳಿಕ ಮತ್ತೆ ಗೂಳಿ ರೇಸ್‌ಗೆ ಅನುಮತಿ

ದೆಹಲಿ: ೭ ವರ್ಷದ ಬಳಿಕ ಮತ್ತೆ ಮಹಾರಾಷ್ಟ್ರದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅನುಮತಿ ಸಿಕ್ಕಿದೆ.ಸುಪ್ರೀಂಕೋರ್ಟ್‌ ನಿಂದ ಗೂಳಿ ರೇಸ್‌ಗೆ ಅನುಮತಿ ಸಿಕ್ಕಿದೆ.ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಮಾಡಿದ ತಿದ್ದುಪಡಿಗಳ ಆಧಾರದ ಮೇಲೆ ಮಹಾರಾಷ್ಟ್ರ ರಾಜ್ಯವು ರಾಜ್ಯದಲ್ಲಿ ಎತ್ತಿನ ಗಾಡಿ ಓಟವನ್ನು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. 2018ರಲ್ಲಿ ಬಾಂಬೆ ಹೈಕೋರ್ಟ್ ರಾಜ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆಗಳನ್ನು ನಡೆಸುವುದರ ವಿರುದ್ಧ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಎಮ್ ಖಾನ್ವಿಲಾರ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಜಲ್ಲಿಕಟ್ಟುವಿನಂತಹ ಸಾಂಪ್ರದಾಯಿಕ ಪ್ರಾಣಿ ಕ್ರೀಡೆಗಳನ್ನು ನಿಷೇಧಿಸಿದ ಪ್ರಾಣಿ ಕಲ್ಯಾಣ ಮಂಡಳಿ ವಿರುದ್ಧ ಎ ನಾಗರಾಜ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ. ಗೂಳಿ ಕಾಳಗದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿತ್ತು . ಈ ಹಿಂದೆ ಇತರ ರಾಜ್ಯಗಳಿಗೂ ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿತ್ತು. ಅವರಿಗೂ ಉತ್ತರಿಸಲು ಕಾಲಾವಕಾಶ ನೀಡಲಾಗಿತ್ತು. 2017 ರಲ್ಲಿ ಮುಂಬೈ ಹೈಕೋರ್ಟ್ ಎತ್ತಿನ ಬಂಡಿ ರೇಸ್ ನಿಷೇಧದ ತೆರವಿಗೆ ಒಪ್ಪಿರಲಿಲ್ಲ. ಇದನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ರಾಜ್ಯದ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 2017ರ ಮಧ್ಯಂತರ ಆದೇಶದ ಅನ್ವಯ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಆದರೆ ಇದೇ ಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ ಯಾಕೆ ಅನುಮತಿ ಇಲ್ಲ ವಾದ ಮಂಡಿಸಿದ್ದರು. ಆದರ ಇದೀಗ ಸುಪ್ರೀಂಕೋರ್ಟ್‌ ನಿಂದ ಗೂಳಿ ರೇಸ್‌ಗೆ ಅನುಮತಿ ಸಿಕ್ಕಿದೆ

Share Post