Districts

ಬೆಂಕಿ ಹಚ್ಚುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ; ಸರ್ಕಾರಕ್ಕೆ ಹೆಚ್ಡಿಕೆ ಆಗ್ರಹ

ಮೈಸೂರು: ಬೆಂಕಿ ಹಚ್ಚುವವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣರಾದವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಲಭೆ ಸೃಷ್ಟಿಸುವವರನ್ನು, ಬೆಂಕಿ ಹಚ್ಚುವವರನ್ನು ಸುಮ್ಮನೆ ಬಿಡಬಾರದು. ಅವರಿ ಸೂಕ್ತ ಶಿಕ್ಷೆಯಾಗಬೇಕು. ಬೆಂಕಿ ಹಚ್ಚುವವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು ಆಜಾನ್‌ ವಿವಾದದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಈ ಸಮಸ್ಯೆಯನ್ನು ಸರ್ಕಾರವೇ ಮುಂದಾಳತ್ವ ವಹಿಸಿ ಇತ್ಯರ್ಥ ಮಾಡಬೇಕು. ಎಲ್ಲಾ ಧಾರ್ಮಿಕ ಗುರುಗಳನ್ನು ಸೇರಿಸಿ, ಈ ವಿವಾದಕ್ಕೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದ್ದಾರೆ.

Share Post