National

ಶಿವರಾತ್ರಿ ಉತ್ಸವ ಉಜ್ಜೈನಿಯಲ್ಲಿ 11.17ಲಕ್ಷ ದೀಪಾಲಂಕಾರ-ಗಿನ್ನಿಸ್‌ ರೆಕಾರ್ಡ್‌

ಉಜ್ಜೈನಿ: ಮಧ್ಯಪ್ರದೇಶ ರಾಜ್ಯದ ಅತ್ಯಂತ ಪ್ರಸಿದ್ಧ ದೇವಾಲಯ ಎಂದು ಕರೆಯಲ್ಪಡುವ ಉಜ್ಜಯಿನಿಯ ದೇವಾಲಯದ ಪಟ್ಟಣದಲ್ಲಿ ಶಿವರಾತ್ರಿ ಆಚರಣೆಯನ್ನು ನಡೆಸಲಾಯಿತು. ಹಬ್ಬದ ಪ್ರಯುಕ್ತ ಮಂಗಳವಾರ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿದ್ದು, ಹೊಸ ಗಿನ್ನಿಸ್ ದಾಖಲೆ ನಿರ್ಮಿಸಲಾಗಿದೆ. ಅಯೋಧ್ಯೆಯ 9.41 ಲಕ್ಷ ಮಣ್ಣಿನ ದೀಪಗಳ ಹಿಂದಿನ ದಾಖಲೆಯನ್ನು ಉಜ್ಜೈನಿ ದೀಪಾಲಂಕಾರ ಮುರಿದಿದೆ. ರಾಜ್ಯ ಸಾಂಸ್ಕೃತಿಕ ಇಲಾಖೆಯ ಆಶ್ರಯದಲ್ಲಿ ರಾಮ್ ಘಾಟ್ ಮತ್ತು ದತ್ತ್ ಅಖಾರಾ ಘಾಟ್‌ನಲ್ಲಿ ಸಂಜೆ 11,71,078 ಮಣ್ಣಿನ ದೀಪಗಳನ್ನು ಬೆಳಗಿಸಿ ಇಡೀ ಪ್ರದೇಶದಿಂದ ದೀಪಗಳಿಂದ ಕಂಗೊಳಿಸಿತು.  ದೀಪಗಳನ್ನು ಬೆಳಗಲು ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರೂ ಭಾಗವಹಿಸಿದ್ದರು. ದೀಪಗಳ ಪರಿಶೀಲನೆಗಾಗಿ ಐವರು ಸದಸ್ಯರ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡ ಉಜ್ಜಯಿನಿಗೆ ಆಗಮಿಸಿತು. ಪರಿಶೀಲನೆ ಬಳಿಕ ದೀಪಾಲಂಕಾರವನ್ನು ಗಿನ್ನಿಸ್‌ ಬುಕ್‌ಗೆ ದಾಖಲೆಗೆ ಸೇರಿಸಲಾಯಿತು.

ತಂಡದ ಸದಸ್ಯರಲ್ಲಿ ಒಬ್ಬರಾದ ನಿಶ್ಚಲ್ ಬೋರಾಟ್ ಎಂಬುವವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ದಾಖಲೆಯನ್ನು ನೀಡಿದ್ರು. ಭಗವಂತನ ಕೃಪೆ ಹಾಗೂ ಜನರ ಭಕ್ತಿಯಿಂದ ಇದು ಸಾಧ್ಯವಾಗಿದೆ ಎಂದರು. ದೀಪಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸಂಜೆ 6.42ಕ್ಕೆ ಸೈರನ್ ಮೊಳಗಿದ ಕೇವಲ 10 ನಿಮಿಷಗಳಲ್ಲಿ 13 ಲಕ್ಷಕ್ಕೂ ಅಧಿಕ ಮಂದಿ 11 ಲಕ್ಷ ದೀಪಗಳನ್ನು ಬೆಳಗಿಸಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

ದೀಪಗಳಿಂದ ಆಕಾಶ ವರ್ಣರಂಜಿತವಾಗಿ ಕಂಡಿದೆ. ಮಹಾಕಾಳೇಶ್ವರ ದೇವಸ್ಥಾನದಲ್ಲಿ 51,000, ಮಂಗಳನಾಥ ದೇವಸ್ಥಾನದಲ್ಲಿ 11 ಸಾವಿರ, ಕಾಲಭೈರವ ದೇವಸ್ಥಾನ ಮತ್ತು ಇತರ ಘಟ್ಟಗಳಲ್ಲಿ 10 ಸಾವಿರ, ಗಡ್ಕಲಿಕಾ ದೇವಸ್ಥಾನದಲ್ಲಿ 1100, ಸಿದ್ಧವತ್ ದೇವಸ್ಥಾನ ಮತ್ತು ಘಾಟ್‌ಗಳಲ್ಲಿ 6 ಸಾವಿರ ಮತ್ತು ಹರಸಿದ್ಧಿ ದೇವಸ್ಥಾನದಲ್ಲಿ 5 ಸಾವಿರ ದೀಪಗಳನ್ನು ಬೆಳಗಿಸಲಾಯಿತು. ಉಜ್ಜಯಿನಿ ಸುತ್ತಮುತ್ತಲಿನ ಅಂಗಡಿಗಳು ಮತ್ತು ಮನೆಗಳಲ್ಲಿ ಜನರು ದೀಪಗಳನ್ನು ಬೆಳಗಿಸಿದರು. ಇಡೀ ಉಜ್ಜೈನಿ ಪ್ರದೇಶದ ಪರೀಕ್ಷಿಸಲು ಡ್ರೋನ್‌ಗಳನ್ನು ಬಳಸಲಾಯಿತು.

 

Share Post