CinemaCrimeNational

ಕಾಲುವೆಯಲ್ಲಿ ಪತ್ತೆಯಾಯಿತು ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ

ಗುರುಗ್ರಾಮ; ಜನವರಿ 2ರಂದು ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಅವರನ್ನು ಮೃತದೇಹ ಪತ್ತೆಯಾಗಿದೆ. ತೊಹ್ನಾದ ಕಾಲುವೆಯಲ್ಲಿ ಪಹುಜಾ ಮೃತದೇಹ ಸಿಕ್ಕಿದ್ದು, ಆಕೆಯ ಕುಟುಂಬಸ್ಥರು ದೇಹವನ್ನು ಗುರುತಿಸಿದ್ದಾರೆ. ಗರುಗ್ರಾಮದ ಹೋಟೆಲ್‌ನಲ್ಲಿ ದಿವ್ಯಾ ಪಹುಜಾಳನ್ನು ಸಾಯಿಸಿ, ಮೃತದೇಹವನ್ನು ಬಿಸಾಕಲಾಗಿತ್ತು. ಪೊಲೀಸರು ಎರಡು ವಾರದಿಂದ ಹುಡುಕಾಟ ನಡೆಸಿದ್ದರು. ಕೊನೆಗೂ ರೂಪದರ್ಶಿಯ ಮೃತದೇಹ ಸಿಕ್ಕಿದೆ.

ಗುರುವಾರವಷ್ಟೇ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಬಾಲ್‌ರಾಜ್‌ ಗಿಲ್‌ ಎಂಬಾತ ವಿಮಾನ ಹತ್ತುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಜನವರಿ 2ರಂದು ಮಾಜಿ ರೂಪದರ್ಶಿ ದಿವ್ಯಾ ಪಹುಜಾಳನ್ನು ಗುರುಗ್ರಾಮದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಗುಂಡಿಕ್ಕಿ ಕೊಂದಿದ್ದರು. ಐದು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ನಂತರ ಬಿಎಂಡಬ್ಲ್ಯೂ ಕಾರಿನಲ್ಲಿ ರವಿ ಬಾಂದ್ರಾ ಎಂಬಾತ ಕೊಂಡೊಯ್ದು ಮೃತದೇಹವನ್ನು ಬಿಸಾಕಿದ್ದ.

 

Share Post