CrimeNational

ಶೀಲ ಶಂಕಿಸಿ ಪತ್ನಿಯ ಗುಪ್ತಾಂಗಕ್ಕೆ ಬೀಗ ಜಡಿದ ಪಾಪಿ!

ಮುಂಬೈ; ಪಾಪಿ ಗಂಡನೊಬ್ಬ ಶೀಲ ಶಂಕಿಸಿ ತನ್ನ ಪತ್ನಿಯ ಗುಪ್ತಾಂಗಕ್ಕೆ ಮೊಳೆ ಹೊಡೆದು ಬೀಗ ಹಾಕಿ ಪೈಶಾಚಿಕವಾಗಿ ವರ್ತಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.. ಸದ್ಯ‌ ಮಹಿಳೆಯನ್ನು ರಕ್ಷಿಸಲಾಗಿದ್ದು, ಶಸ್ತ್ರ ಚಿಕಿತ್ಸೆ ಮೊಳೆಗಳು ಹಾಗೂ ಬೀಗವನ್ನು ತೆಗೆಯಲಾಗಿದೆ..

   ಪುಣೆ ನಗರದ ವಾಕಡ್ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ.. ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ..  ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ವಾಸಿಸುತ್ತಿರುವ ಉಪೇಂದ್ರ ಹುಡಕೆ (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ..

  ದಂಪತಿ ಇಬ್ಬರೂ ನೇಪಾಳ ಮೂಲದವರಾಗಿದ್ದಾರೆ.. ಕೆಲಸ ಅರಸಿ ಮುಂಬೈಗೆ ಬಂದಿದ್ದರು.. ಇತ್ತೀಚೆಗೆ ಆರೋಪಿ ಪತ್ನಿಯ ಶೀಲ ಶಂಕಿಸಿ ಆಕೆ ಮೇಲೆ ಹಲ್ಲೆ ಮಾಡುತ್ತಿದ್ದ.. ಕೆಲ ದಿನಗಳ ಹಿಂದೆ ಕಂಠಪೂರ್ತಿ ಕುಡಿದುಬಂದಿದ್ದ ಆತ, ಪತ್ನಿ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಒಡೆದು ಬೀಗ ಜಡಿದಿದ್ದಾನೆ..

ಮಹಿಳೆ ಕಿರುಚಾಡುವ ಶಬ್ದ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬಾತ ಸ್ಥಳಕ್ಕೆ ಬಂದು‌ ನೋಡಿದಾಗ ಪರಿಸ್ಥಿತಿ ಅರ್ಥವಾಗಿದೆ.. ಕೂಡಲೇ ಸುತ್ತಮುತ್ತಲಿನವರನ್ನು ಕರೆದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.. ಸದ್ಯ ಮಹಿಳೆ ಚೇತರಿಸಿಕೊಂಡಿದ್ದಾಳೆ..

 

Share Post