ಶಾಸಕರ ಖರೀದಿ ಯತ್ನ ಪ್ರಕರಣ; ಸಂತೋಷ್ಗೆ ಹಿನ್ನಡೆ
ಹೈದರಾಬಾದ್; ತೆಲಂಗಾಣದಲ್ಲಿ ಟಿಆರ್ಎಸ್ ಪಾರ್ಟಿಯ ನಾಲ್ವರು ಶಾಸಕರ ಖರೀದಿ ಯತ್ನ ಆರೋಪ ಸಂಬಂಧ ಹೈದರಾಬಾದ್ ವಿಶೇಷ ತನಿಖಾ ತಂಡ ತನಿಖೆ ತೀವ್ರಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ಇದನ್ನು ಪ್ರಶ್ನಿಸಿ ಸಂತೋಷ್ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಅದಕ್ಕೆ ಹಿನ್ನಡೆಯಾಗಿದೆ.
ಎಸ್ಐಟಿ ನೀಡಿದ್ದ ನೋಟಿಸ್ಗೆ ತಡೆಯಾಜ್ಞೆ ನೀಡುವಂತೆ ಬಿ.ಎಲ್ ಸಂತೋಷ್ ತೆಲಂಗಾಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಣೆ ಮಾಡಿದೆ. ಅಲ್ಲದೇ ನೋಟಿಸ್ ವಿಚಾರದಲ್ಲಿ ಸಹಕರಿಸುವಂತೆ ಸೂಚಿಸಿದೆ.