ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ; ಬಾಯ್ಬಿಡದ ಆರೋಪಿ
ಮಂಗಳೂರು; ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣದ ತನಿಖೆಯ ಚುರುಕುಗೊಂಡಿದೆ. ಪೊಲೀಸರ ಪರಿಶೀಲನೆ ವೇಳೆ ಸ್ಥಳದಲ್ಲಿ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಟ್, ಬೋಲ್ಟ್, ಬ್ಯಾಟರಿ, ಸರ್ಕಿಟ್ ರೀತಿಯ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿದೆ. ಸ್ಫೋಟಕ್ಕೆ ಲಘು ತೀವ್ರತೆಯ ಸ್ಪೋಟಕ ಬಳಸಲಾಗಿದೆ ಎಂದು ತಿಳಿದುಬಂದಿದೆ. ಬಾಕ್ಸ್ ಮತ್ತು ಬ್ಯಾಗ್‌ನಿಂದಲೇ ನಿಗೂಢ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಪೋಟದ ತೀವ್ರತೆಗೆ ಆಟೋದಲ್ಲಿದ್ದಾತನ ದೇಹ ಶೇ.50ರಷ್ಟು ಸುಟ್ಟಿದೆ.
ಆರೋಪಿ ತಮಿಳುನಾಡಿನಿಂದ ಮೈಸೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಟೋ ಹತ್ತಿದ್ದ. ಆದ್ರೆ ಆಟೋ ಒಂದು ಕಿಲೋಮೀಟರ್ ಕ್ರಮಿಸುವಷ್ಟರಲ್ಲಿ ಸ್ಫೋಟ ಸಂಭವಿಸಿದೆ.
ಪೊಲೀಸರ ಪರಿಶೀಲನೆ ವೇಳೆ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ದಾಖಲೆಯಲ್ಲಿ ಮೈಸೂರಿನ ವಿಳಾಸ ಇದೆ. ಆದ್ರೆ ಇದು ನಕಲಿ ಅನ್ನೋದು ಖಾತ್ರಿಯಾಗಿದೆ.