ಅಕ್ಟೋಬರ್ 8ರ ಬಳಿಕ ED ಆಟ ಶುರು?; ಸಿದ್ದರಾಮಯ್ಯ ಪಾಳಯದಲ್ಲಿ ಢವಢವ!
ಬೆಂಗಳೂರು; ಮುಡಾ ಹಗರಣದ ಹಿನ್ನೆಲೆಯಲ್ಲಿ ಕಾನೂನು ಸಂಕಷ್ಟದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ವಲಯಕ್ಕೆ ಅಕ್ಟೋಬರ್ 8ರ ಬಳಿಕ ಸಂಕಷ್ಟ ಕಾಡಲಿದೆ ಎಂದು ಹೇಳಲಾಗುತ್ತಿದೆ.. ಹರಿಯಾಣ ಹಾಗೂ ಜಮ್ಮು-ಕಾಶ್ಮೀರದ ಚುನಾವಣೆ ನಡೆಯುತ್ತಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.. ಅನಂತರ ಮುಡಾ ಹಗರಣ ವಿಚಾರ ಮುನ್ನೆಲೆಗೆ ಬರಲಿದೆ.. ಇಡಿ ಅಧಿಕಾರಿಗಳು ಎಂಟ್ರಿಯಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಪಾಳಯದಲ್ಲಿ ಢವಢವ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ..
ಒಂದು ಕಡೆ ಲೋಕಾಯುಕ್ತ ಅಧಿಕಾರಿಗಳು ಕೋರ್ಟ್ ಆದೇಶದ ಮೇಲೆ ತನಿಖೆ ಶುರು ಮಾಡುತ್ತಿದ್ದಾರೆ.. ಡಿಸೆಂಬರ್ ಒಳಗೆ ಲೋಕಾಯುಕ್ತ ಅಧಿಕಾರಿಗಳು ಮುಡಾ ಹಗರಣದ ಸಂಬಂಧ ತನಿಖೆ ಮಾಡಿ ಕೋರ್ಟ್‌ಗೆ ವರದಿ ನೀಡಬೇಕಾಗಿದೆ.. ಇನ್ನೊಂದೆಡೆ ಇಡಿ ಅಧಿಕಾರಿಗಳು ಕೂಡಾ ECIR ದಾಖಲು ಮಾಡಿಕೊಂಡಿದ್ದಾರೆ.. PMLA ಆಕ್ಟ್ ಅಡಿ ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಆಪ್ತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಏಕಕಾಲದಲ್ಲಿ ರಾಜ್ಯದ ಹಲವೆಡೆ ದಾಳಿ ನಡೆಸೋದಕ್ಕೆ ಸಿದ್ಧತೆ ನಡೆದಿದೆ ಎಂಬ ಸುದ್ದಿಗಳಿವೆ..
ಇನ್ನು ಮುಡಾದಲ್ಲಿ ಬದಲಿ ನಿವೇಶನ ಪಡೆದ ವಿಚಾರ ದೊಡ್ಡದಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು 14 ನಿವೇಶನಗಳನ್ನು ಮೂಡಾಕ್ಕೆ ವಾಪಸ್ ಕೊಟ್ಟಿದ್ದಾರೆ.. ಪಾರ್ವತಿಯವರು ಪತ್ರ ಬರೆದ 24 ಗಂಟೆಗಳೊಳಗೇ ಮುಡಾ ಕೂಡಾ ಈ 14 ನಿವೇಶನಗಳ ಖಾತೆ ಹಂಚಿಕೆಯನ್ನು ರದ್ದು ಮಾಡಿದೆ… ನಿವೇಶನಗಳನ್ನು ವಾಪಸ್ ಕೊಟ್ಟಿರುವುದರಿಂದ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಇನ್ನಷ್ಟು ಸಂಕಷ್ಟ ಎದುರಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ..
ಶೀಘ್ರದಲ್ಲೇ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ.. ಈ ಚುನಾವಣೆಗೆ ಕರ್ನಾಟಕದಿಂದ ಮಹಾರಾಷ್ಟ್ರ ಕಾಂಗ್ರೆಸ್‌ಗೆ ಹಣಕಾಸು ಪೂರೈಕೆಯಾಗುವ ಸಾಧ್ಯತೆ ಇದೆ.. ಈ ಹಿನ್ನೆಲೆಯಲ್ಲಿ ಅದನ್ನು ತಡೆಯಲು ಬಿಜೆಪಿ ಮೆಗಾ ಪ್ಲ್ಯಾನ್ ಕೂಡಾ ಮಾಡಿದೆ ಎಂಬ ಮಾತುಗಳಿವೆ.. ಅಕ್ಟೋಬರ್ 8ರಂದು ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯದಲ್ಲಿ ಮುಡಾ ವಿಚಾರ ಮುನ್ನೆಲೆಗೆ ತಂದು ತನಿಖೆ ಚುರುಕುಗೊಳಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ..