National

CYLINDER BLAST; ಏಕಕಾಲದಲ್ಲಿ 4 ಸಿಲಿಂಡರ್‌ ಸ್ಫೋಟ; ಭಾರಿ ಬೆಂಕಿ

ಕರದ್‌ನಗರ (ಮಹಾರಾಷ್ಟ್ರ): ಮಹಾರಾಷ್ಟ್ರದ ಕರದ್‌ ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂಡು ಭಾರಿ ದುರಂತಕ್ಕೆ ಕಾರಣವಾಗಿದೆ. ಒಂದು ಮನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡ ನಂತರ ಬೆಂಕಿ ಬೇರೆ ಮನೆಗಳಿಗೂ ವ್ಯಾಪಿಸಿದ್ದು, ಆ ಮನೆಗಳಲ್ಲಿದ್ದ ಇನ್ನೂ ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ.

ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಬಡಾವಣೆಗೆ ತೆರಳಿ ಜನರನ್ನು ಮನೆಯಿಂದ ಹೊರಗೆ ಕರೆದೊಯ್ದರು. ತಡರಾತ್ರಿಯವರೆಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಬೆಂಕಿ ಇನ್ನೂ ನಿಯಂತ್ರಣದಲ್ಲಿದೆ. ಈ ಭಾಗದ ಜನರನ್ನು ಶಾಲೆಯಲ್ಲಿ ಇರಿಸಲಾಗಿದೆ. ಈ ಹಿಂದೆ ಕೂಡಾ ಈ ಪ್ರದೇಶ ಹಲವು ಬಾರಿ ಬೆಂಕಿಗೆ ಆಹುತಿಯಾಗಿದೆ.

Share Post