National

ಗೋವಾ ವಿಧಾನಸಭೆ ಪ್ರವೇಶಿಸುತ್ತಿರುವ ಮೂವರು ದಂಪತಿಗಳು

ಪಣಜಿ: 40 ಕ್ಷೇತ್ರಗಳಿರುವ ಗೋವಾ ವಿಧಾನಸಭೆ ಈ ಬಾರಿ ಕುತೂಹಕ್ಕೆ ಕಾರಣವಾಗಿದೆ. ಯಾಕೆಂದ್ರೆ ಈ ಬಾರಿ ಮೂವರು ದಂಪತಿಗಳು ವಿಧಾಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಹಾಲಿ ಆರೋಗ್ಯ ಸಚಿವರಾಗಿದ್ದ ವಿಶ್ವಜಿತ್‌ ರಾಣೆ ಅವರು ವಲ್ಪೋಯ್‌ ಕ್ಷೇತ್ರದಿಂದ ಹಾಗೂ ಅವರ ಪತ್ನಿ ದಿವ್ಯಾ ಅವರು ಪೊರಿಯಮ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಪಣಜಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಟಾನಾಸಿಯೊ ಮೊನ್ಸೆರಾಟ್ಟೆ ಅವರು ಚುನಾಯಿತರಾಗಿದ್ದಾರೆ. ಅವರ ಪತ್ನಿ ಜೆನಿಫರ್ ಬಿಜೆಪಿ ಟಿಕೆಟ್‌ನಲ್ಲಿ ತಾಲೀಗಾವೊದಿಂದ ಗೆದ್ದಿದ್ದಾರೆ.

ಇನ್ನು ಕಾಂಗ್ರೆಸ್‌ನಿಂದ ಕಲಾಂಗುಟ್‌ನಿಂದ ಸ್ಪರ್ಧಿಸಿದ್ದ ಮೈಕೆಲ್‌ ಲೋಬೋ ಈ ಬಾರಿಯೂ ಗೆದ್ದಿದ್ದಾರೆ. ಇನ್ನು ಅವರ ಪತ್ನಿ ದೆಲಿಲಾ ಅವರು ಕೂಡಾ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಪಡೆದು ಸಿಯೋಲಿಮ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅವರು ಕೂಡಾ ಚುನಾಯಿತರಾಗಿದ್ದಾರೆ. ಈ ಆರೂ ಮಂದಿ ಈಗ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

Share Post