ಸಂವಿಧಾನ ಬದಲಾವಣೆ ಮಾಡಬೇಕಾದ ಅವಶ್ಯಕತೆಯೇ ಬರುವುದಿಲ್ಲ; ಪ್ರಧಾನಿ ಮೋದಿ
ನವದೆಹಲಿ; ಸಂವಿಧಾನ ಬದಲಾವಣೆ ಬಗ್ಗೆ ಆಗಾಗ ಕೆಲವರು ಹೇಳಿಕೆ ನೀಡುತ್ತಿರುತ್ತಾರೆ. ಬಿಜೆಪಿ ನಾಯಕರು ಕೂಡಾ ಕೆಲವರು ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದ್ದಿದೆ. ಕರ್ನಾಟಕದ ಕೆಲ ಸಂಸದರು ಈ ಬಗ್ಗೆ ಮಾತನಾಡಿ ವಿವಾದ ಎಬ್ಬಿಸಿದ್ದೂ ಇದೆ. ಆದ್ರೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ದೇಶದ ಸಂವಿಧಾನವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಂವಿಧಾನದ ಬದಲಾವಣೆ ದೇಶಕ್ಕೆ ಸದ್ಯಕ್ಕೆ ಬೇಕಾಗಿಲ್ಲ. ಅಂತಹ ಸಾಹಸ ಮಾಡದೆಯೇ ದೇಶದಲ್ಲಿ ಉತ್ತಮ ಬದಲಾವಣೆಯನ್ನು ತರಬಹುದು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ದೇಶದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಮೋದಿ ಹೇಳಿಕೊಂಡಿದ್ದಾರೆ.