BengaluruCrimeHealth

24 ಲಕ್ಷದ ಹೊಸ ಬೈಕ್‌ನಲ್ಲಿ ಸ್ಟಂಟ್‌ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಸವಾರ!

ಬೆಂಗಳೂರು; ವ್ಯಕ್ತಿಯೊಬ್ಬ 24 ಲಕ್ಷ ರೂಪಾಯಿ ಮೌಲ್ಯದ ಬೈಕ್‌ ತಂದಿದ್ದ. ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ ಬೈಕ್‌.. ದುಬಾರಿ ಬೆಲೆಯ ಬೈಕ್‌ ತಂದ ಮೇಲೆ ರಸ್ತೆಗಿಳಿಯದಿದ್ದರೆ ಆಗುತ್ತಾ..? ರಸ್ತೆಗಿಳಿದರೆ ಪರವಾಗಿಲ್ಲ. ಆದ್ರೆ, ಅದೇ ಕ್ರೇಜ್‌ನಲ್ಲಿ ಓವರ್‌ ಆಕ್ಷನ್‌ ಮಾಡಿದರೆ ಏನಾಗುತ್ತೆ ಅನ್ನೋದಕ್ಕೆ ಈ ಘಟನೆ ಉದಾಹರಣೆ. 

ಜಯನಗರ ಅಶೋಕ ಪಿಲ್ಲರ್‌ ಬಳಿ ಈ ದುಬಾರಿ ಬೈಕ್‌ನ್ನ ವ್ಹೀಲಿಂಗ್‌ ಮಾಡುತ್ತಾ ಅತಿವೇಗಾಗಿ ಓಡಿಸಲಾಗಿದೆ. ಈ ವೇಳೆ ಅದು ನಿಯಂತ್ರಣ ತಪ್ಪಿ ಎದುರಿಗೆ ಬಂದ ಸ್ವಿಫ್ಟ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್‌ ಸವಾರ ಶೇಕ್ ನಾಸಿರ್ (32) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರನಿಗೂ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

Share Post