CinemaCrimeNational

ನಟ ಮೋಹನ್ ಬಾಬು ಮನೆಯಲ್ಲಿ ಕಳ್ಳತನ!

ಹೈದರಾಬಾದ್; ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಮನೆಯಲ್ಲಿ 10 ಲಕ್ಷ ರೂಪಾಯಿ ಕಳ್ಳತನವಾಗಿದೆ.. ಈ ಸಂಬಂಧ ತಿರುಪತಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ..

  ಹೈದರಾಬಾದ್ ನ ಉಪನಗರದ ಜಾಲ್ ಪಲ್ಲಿ ಎಂಬಲ್ಲಿ ನಟ ಮೋಹನ್ ಬಾಬು ಅವರ ಮನೆ ಇದೆ.. ಆ ಮನೆಯಲ್ಲಿ ಇಟ್ಟಿದ್ದ 10 ಲಕ್ಷ ರೂಪಾಯಿ ಹಣ ಎಗರಿಸಿದ್ದರು.. ಪೊಲೀಸರು ತನಿಖೆ ನಡೆಸಿದಾಗ ಮೋಹನ್ ಮನೆಯಲ್ಲಿ ಕೆಲಸ ಮಾಡುವ ನಾಯಕ್ ಎಂಬಾತನ ಮೇಲೆ ಅನುಮಾನ ಬಂದಿದೆ..

 ಸೆಪ್ಟೆಂಬರ್ 25 ರಂದು ಪೊಲೀಸ್ ಠಾಣೆಯಲ್ಲಿ ಮೋಹನ್ ಬಾಬು ದೂರು ಕೊಟ್ಟಿದ್ದರು.. ಪೊಲೀಸರು ನಾಯಕ್ ನನ್ನು ತಿರುಪತಿಯಲ್ಲಿ ಬಂಧಿಸಿದ್ದಾರೆ.. ಆತ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.. ಆರೋಪಿಯನ್ನು ಹೈದರಾಬಾದ್ ಗೆ ಕರೆದುಕೊಂಡು ಬರಲಾಗಿದೆ.

 

Share Post