BengaluruCrime

ಬೆಂಗಳೂರಿನಲ್ಲಿ ಶಂಕಿತ ಉಗ್ರನ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಥಣಿಸಂದ್ರದಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧನ ಮಾಡಲಾಗಿದೆ.

ಥಣಿಸಂದ್ರ ‌ನಿವಾಸಿ ಆರಿಫ್ ಬಂದಿತ ಶಂಕಿತ ಉಗ್ರ, ಈತ ಮನೆಯಿಂದಲೇ ಉದ್ಯೋಗ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿ ಟೆಲಿಗ್ರಾಂ ಆ್ಯಪ್ ಮೂಲಕ ಆಲ್ ಖೈದಾ ಜೊತೆ ಗುರುತಿಸಿಕೊಂಡಿದ್ದ ಎಂದು ಶಂಕಿಸಲಾಗಿದೆ. ಕಳೆದ ಎರಡು ವರ್ಷದಿಂದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆರಿಫ್, ಡಾರ್ಕ್ ನೆಟ್ ಬಳಸಿ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡು ಬಾಂಬ್ ತಯಾರಿಕೆಯಲ್ಲಿ ಪ್ರಾಕ್ಟೀಸ್ ಮಾಡುವುದನ್ನ ಕರಗತ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ಅನೇಕ ಭಾರಿ ಸಿರಿಯಾಗೆ ಹೋಗಿ ಬಂದಿದ್ದ ಆರಿಫ್ , ಮತ್ತೆ ಸಿರಿಯಾಗೆ ಹೋಗಲು ತಯಾರಿ ನಡೆಸಿದ್ದ. ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೆರೆಗೆ ISD ಟೀಮ್ ಆರಿಫ್ ನನ್ನು ಬಂದಿಸಿದೆ.

Share Post