National

ಇದು ʻಮೋದಿ ಸ್ಟೋರಿ‌ʼ ವೆಬ್‌ಪೋರ್ಟ್‌ಲ್: ಪ್ರಧಾನಿ ಜೀವನದ ಕುತೂಹಲಕಾರಿ ಘಟನೆಗಳ ಸಂಗಮ

ದೆಹಲಿ: ಕಳೆದ ಎಂಟು ವರ್ಷಗಳಿಂದ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆತ್ಮನಿರ್ಭರ ಭಾರತ್, ಮನ್ ಕಿ ಬಾತ್ ನಂತಹ ಕಾರ್ಯಕ್ರಮಗಳೊಂದಿಗೆ ಪ್ರಧಾನಿ ಮೋದಿ ದೇಶದ ಎಲ್ಲಾ ವರ್ಗದ ಜನರೊಂದಿಗೆ ಬೆರೆತಿದ್ದಾರೆ. ಮೋದಿಯವರು ಎಷ್ಟೇ ಅಡೆತಡೆಗಳು ಎದುರಾದರೂ ಜನ ಮತ್ತು ದೇಶಕ್ಕಾಗಿ ನಿರಂತರವಾಗಿ ತಮ್ಮ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಜನತೆ ಪ್ರಧಾನಿ ಮೋದಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕಾರ್ಯಕ್ರಮಕ್ಕೆ ಕೈ ಹಾಕಿದ್ದಾರೆ. “ದಿ ಮೋದಿ ಸ್ಟೋರಿ” ಎಂಬ  ವೆಬ್‌ಸೈಟ್‌ ಪ್ರಾರಂಭ ಮಾಡಲಾಗಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು ಒಳಗೊಂಡಿದೆ. ರಾಜಕೀಯ ನಾಯಕರಾಗಿ ಮೋದಿಯವರ ಬೆಳವಣಿಗೆ, ಮುಖ್ಯಮಂತ್ರಿಯಿಂದ ಪ್ರಧಾನಿಯವರೆಗೆ ಅವರ ಪಯಣ ಮತ್ತು ಪ್ರಧಾನಿಯಾಗಿ ಅವರ ಕೆಲಸ ಕಾರ್ಯಗಳು ಏನು ಎಂಬುದನ್ನು ವಿವರಿಸಲಾಗಿದೆ.  ಈ ಬೃಹತ್ ಕಾರ್ಯಕ್ರಮವು ಮೋದಿಯವರು ರಾಜಕೀಯ ನಾಯಕರಾಗಿ ತಮ್ಮ ಅಧಿಕಾರಾವಧಿಯನ್ನು ಪ್ರಾರಂಭಿಸಿದ ನಂತರ ಅವರೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡಿದ ಕೆಲವು ಜನರ ಆಲೋಚನೆಗಳಿಂದ ಹುಟ್ಟಿಕೊಂಡಿದೆ. ಮೋದಿಯವರನ್ನು ಹತ್ತಿರದಿಂದ ನೋಡಿದ ಜನರು ಮೋದಿಯವರ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡು ಅವರ ವ್ಯಕ್ತಿತ್ವವನ್ನು ದೇಶದ ಜನತೆಗೆ ತಿಳಿಸಲು “ದಿ ಮೋದಿ ಸ್ಟೋರಿ”ಯನ್ನು ರಚಿಸಿದ್ದಾರೆ.

ಈ ವೆಬ್‌ಪೋರ್ಟ್‌ಲ್‌ ಅನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಚಾಲನೆ ನೀಡಿದ್ರು. modistory.in ವೆಬ್ ಸೈಟ್ ಬಿಡುಗಡೆ ವೇಳೆ ಬಿಜೆಪಿ ನಾಯಕರು ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ಇಂತಹ ಮಹಾನ್ ನಾಯಕನನ್ನು ಪಡೆದ ಭಾರತೀಯ ಜನತೆ ಅದೃಷ್ಟವಂತರು ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ರು. ಸುಮಿತ್ರಾ ಗಾಂಧಿ ಕುಲಕರ್ಣಿ, ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿ ಚಂದ್ ಸೇರಿದಂತೆ ಹಲವರು ಮೋದಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Share Post