ಮಾಜಿ ಪತಿಗೆ ವಿಶ್ ಮಾಡಲಿಲ್ಲ ; ನಾಯಿಗೆ ಬರ್ತ್‌ಡೇ ಮಾಡಿದ ಸಮಂತಾ..!
ನಟಿ ಸಮಂತಾ ಸತತವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಪತಿ, ನಟ ನಾಗಚೈತನ್ಯರಿಂದ ದೂರವಾಗಿರುವ ನಟಿ ಸಮಂತಾ, ನಾಗಚೈತನ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ನಡುವೆಯೇ ನಾಗಚೈತನ್ಯ ಬೆಂಬಲಿಗರ ಕೋಪ ನೆತ್ತಿಗೇರುವ ರೀತಿಯಲ್ಲಿ ನಟಿ ಸಮಂತಾ ನಡೆದುಕೊಂಡಿದ್ದಾರೆ.
ಅಂದಹಾಗೆ, ನವೆಂಬರ್ 23ರಂದು ನಟ ನಾಗಚೈತನ್ಯ ಹುಟ್ಟುಹಬ್ಬವಿತ್ತು. ಆದರೆ ಪತಿಯಿಂದ ದೂರವಾಗಿರುವ ನಟಿ ಸಮಂತಾ, ತಮ್ಮ ಮಾಜಿ ಪತಿಗೆ ವಿಶ್ ಮಾಡಿರಲಿಲ್ಲ. ಹೀಗಾಗಿ ನಾಗ ಚೈತನ್ಯ ಅಭಿಮಾನಿಗಳು, ಸಮಂತಾ ವಿರುದ್ಧ ಕಿಡಿ ಕಾರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸಮಂತಾ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಆದರೆ ಅದರ ಬದಲಾಗಿ ಸಮಂತಾ ಅವರು ತಮ್ಮ ಸಾಕುನಾಯಿಗೆ ಬರ್ತ್ ಡೇ ಆಚರಿಸಿದ್ದಾರೆ. ನವೆಂಬರ್ 24 ರಂದು ತಮ್ಮ ಸಾಕು ನಾಯಿಗೆ 3ನೇ ವರ್ಷದ ಬರ್ತ್ ಡೇ ಆಚರಿಸಿರುವ ಸಮಂತಾ, ಆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.