Districts

ಭ್ರಷ್ಠಾಚಾರ, ಕರ್ತವ್ಯಲೋಪ ಹಿನ್ನೆಲೆ; ಮಂಡ್ಯ ತಹಸೀಲ್ದಾರ್‌ ಅಮಾನತು

ಮಂಡ್ಯ: 13 ಕ್ಕೂ ಹೆಚ್ಚು ಆರೋಪಗಳನ್ನು ಎದುರಿಸುತ್ತಿದ್ದ ಮಂಡ್ಯ ತಹಸೀಲ್ದಾರ್‌ ಚಂದ್ರಶೇಖರ್‌ ಶಂಭಣ್ಣ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಸ್.ರಶ್ಮಿ ಅಮಾನತು ಮಾಡಿ ಈ ಆದೇಶ ಹೊರಡಿಸಿದ್ದಾರೆ.

  ತಹಸೀಲ್ದಾರ್‌ ಚಂದ್ರಶೇಖರ್‌ ಶಂಭಣ್ಣ ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರು ಮಾರ್ಚ್‌ 8 ರಂದು ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಇಲಾಖೆ, ತಹಸೀಲ್ದಾರ್‌ ಅವರನ್ನು ಅಮಾನತುಗೊಳಿಸಿದೆ.

    ವಸತಿ ಗೃಹದ ವಿದ್ಯುತ್ ಬಾಕಿ 9,493 ರೂ. ಪಾವತಿಸದೇ ಸುಳ್ಳು ಮಾಹಿತಿ ನೀಡಿ, ಚೆಸ್ಕಾಂ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿ ತಮ್ಮ ಅಧಿಕಾರ ದುರುಪಯೋಗ ಆರೋಪ ಇವರ ಮೇಲಿತ್ತು. ಇನ್ನು ಹಳೇಬೂದನೂರು ಗ್ರಾಮದಲ್ಲಿ ನಿವೇಶನ ಹಂಚಿಕೆ ಸಂಬಂಧ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೂಡ ಇದೆ. ಕೊವಿಡ್ ಮೂರನೇ ಅಲೆ ವೇಳೆ ಮಗನ ಜನ್ಮದಿನ ಆಚರಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಮೇಲಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಮನಬಂದಂತೆ ರಜೆ ಹಾಕಿರುವುದು, ಸ್ವರ್ಣಸಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ 525ಕ್ಕೂ ಹೆಚ್ಚು ಅಕ್ಕಿ ಮೂಟೆ ನಾಪತ್ತೆಯಾದರೂ ದೂರು ದಾಖಲಿಸದಿರುವುದು ಸೇರಿದಂತೆ ಹಲವು ಆರೋಪಗಳು ತಹಸಶೀಲ್ದಾರ್‌ ಶಂಭಣ್ಣ ಅವರ ವಿರುದ್ಧ ಇವೆ.

Share Post