CrimeNational

ಮಟನ್‌ ಊಟದಲ್ಲಿ ಮೂಳೆ ಸಿಗದಿದ್ದಕ್ಕೆ ಮದುವೆಯೇ ಕ್ಯಾನ್ಸಲ್‌

ನಿಜಾಮಾಬಾದ್‌; ಇಂತಹ ಘಟನೆಗಳು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೇ ನಡೆಯೋಕೆ ಸಾಧ್ಯ. ಅಷ್ಟಕ್ಕೂ ಇಲ್ಲಿ ನಡೆದಿರೋದು ಏನು ಗೊತ್ತಾ..? ಮದುವೆ ನಿಶ್ಚಯವಾಯಿತು ಅನ್ನೋ ಕಾರಣಕ್ಕೆ ವಧುವಿನ ಮನೆಯವರು ಮಾಂಸದೂಟದ ಪಾರ್ಟಿ ಏರ್ಪಡಿಸಿದ್ದರು. ಈ ಮಟನ್‌ ಸಾಂಬಾರಿನಲ್ಲಿ ಮೂಳೆ ಸಿಕ್ಕಿಲ್ಲ. ಇದೇ ನೆಪವಾಗಿಟ್ಟುಕೊಂಡು ವಶುವಿನ  ಕಡೆಯವರು ಮೂಳೆ ಹಾಕದೇ ಅವಮಾನ ಮಾಡಿದ್ದಾರೆ ಎಂದು ಮದುವೆಯೇ ಕ್ಯಾನ್ಸಲ್‌ ಮಾಡಲಾಗಿದೆ. ತೆಲಂಗಾಣದ ನಿಜಾಮಾಬಾದ್‌ ಬಳಿ ಈ ಘಟನೆ ನಡೆದಿದೆ.

ಮದುವೆ ನಿಶ್ಚಯ ಆಗಿತ್ತು. ಮದುವೆ ದಿನಾಂಕ ಫಿಕ್ಸ್‌ ಆಗಿತ್ತು. ಈ ಕಾರಣದಿಂದಾಗಿ ವಧುವಿನ ಮನೆಯವರು ಪಾರ್ಟಿ ಏರ್ಪಡಿಸಿದ್ದರು. ಇಲ್ಲಿ ಮಟನ್‌ ಊಟ ಎಂದರೆ ನಲ್ಲಿ ಮೂಳೆಯೂ ಇರುತ್ತದೆ. ಮೂಳೆ ಕಡಿಯದೆ ಇಲ್ಲಿನ ಜನಕ್ಕೆ ಮಟನ್‌ ಊಟ ಮಾಡಿದಂತೆ ಅನಿಸೋದಿಲ್ಲ. ಆದ್ರೆ, ಈ ಪಾರ್ಟಿಯಲ್ಲಿ ಕೆಲವರಿಗೆ ಮೂಳೆ ಸಿಕ್ಕಿಲ್ಲ. ಬರೀ ಮಾಂಸ ಬಡಿಸಲಾಗಿದೆ. ಇದರಿಂದ ವರನ ಕಡೆಯವರು ರೊಚ್ಚಿಗೆದ್ದಿದ್ದಾರೆ. ನಮಗೆ ಮೂಳೆ ನೀಡದೇ ಅವಮಾನ ಮಾಡಲಾಗಿದೆ ಎಂದು ಗಲಾಟೆ ಮಾಡಿದ್ದಾರೆ.

ಇದೇ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿದೆ. ಕೊನೆಗೆ ಮದುವೆ ರದ್ದು ಮಾಡಿಕೊಂಡು ಅವರವರ ಮನೆಗಳಿಗೆ ಅವರು ತೆರಳಿದ್ದಾರೆ.

 

Share Post