CinemaCrime

ತಮಿಳು ರಾಜಕಾರಣಿ ಸೀಮನ್‌ ವಿರುದ್ಧ ಕೇಸ್‌; ನಟಿ ವಿಜಯಲಕ್ಷ್ಮೀಗೆ ತಿರುಗುಬಾಣವಾಯ್ತಾ..?

ಚೆನ್ನೈ; ತಮಿಳುನಾಡು ರಾಜಕಾರಣಿ ಸೀಮನ್‌ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಹಲವಾರು ಬಾರಿ ಗರ್ಭಪಾತ ಮಾಡಿಸಿರುವ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮೀ ಈಗ ಅವರೇ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 2011ರಲ್ಲಿ ಸೀಮನ್‌ ತನ್ನನ್ನು ಮದುವೆಯಾಗಿದ್ದರು. ಅಂದಿನಿಂದ ಹಲವಾರು ಬಾರಿ ಹಿಂಸೆ, ಕಿರುಕುಳ ಕೊಟ್ಟಿದ್ದಾರೆ ಎಂದು ವಿಜಯಲಕ್ಷ್ಮೀ ಆರೋಪ ಮಾಡಿದ್ದರು. 

ಆದ್ರೆ ನಂತರ ಅದೇನಾಯ್ತೋ ಏನೋ ವಿಜಯಲಕ್ಷ್ಮೀ ಕೇಸ್‌ ಹಿಂಪಡೆದಿದ್ದರು. ಈ ಬಗ್ಗೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಕೂಡಾ ಹಂಚಿಕೊಂಡಿದ್ದರು. ಈ ವಿಚಾರವನ್ನು ಪೊಲೀಸರು ಕೇಸ್‌ ಹಿಂಪಡೆದ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಸೆಪ್ಟೆಂಬರ್‌ 29ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಿದೆ.

2012ರಲ್ಲೇ ವಿಜಯಲಕ್ಷ್ಮೀ ಅವರು ಸೀಮನ್‌ ವಿರುದ್ಧ ಕೇಸ್‌ ದಾಖಲಿಸಿದ್ದರು. ಅನಂತರ ವಾಪಸ್‌ ಪಡೆದಿದ್ದರು. ಕೆಲ ದಿನಗಳ ಹಿಂದೆ ಮತ್ತೆ ದೂರು ಕೊಟ್ಟು, ಹಿಂದೆ ದೂರನ್ನು ಮತ್ತೆ ಮರುಪರಿಶೀಲನೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈಗ ಮತ್ತೆ ವಿಜಯಲಕ್ಷ್ಮೀ ಕೇಸ್‌ ವಾಪಸ್‌ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ರಾಸ್‌ ಹೈಕೋರ್ಟ್‌ ವಿಜಯಲಕ್ಷ್ಮಿಗೆ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ಕೊಟ್ಟಿದೆ.

 

Share Post