DistrictsHealth

ಕರ್ನಾಟಕದಲ್ಲಿ ಕೋವಿಡ್‌ ಉಪ ತಳಿ ಜೆಎನ್‌ 1ಗೆ ಮೊದಲ ಬಲಿ!

ಹಾಸನ; ಕೋವಿಡ್‌ ರೂಪಾಂತರಿ ತಳಿ ಜೆಎನ್‌ 1 ಕೇರಳಕ್ಕೆ ವಕ್ಕರಿಸಿದ ಮೇಲೆ ಕರ್ನಾಟಕದಲ್ಲೂ ಭೀತಿ ಉಂಟಾಗಿತ್ತು. ಇದೀಗ ಇದು ಕರ್ನಾಟಕಕ್ಕೂ ಕಾಲಿಟ್ಟಿದೆ. ಹಲವರು ಈ ಸೋಂಕಿಗೆ ತುತ್ತಾಗಿದ್ದಾರೆ. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.  ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಐವರಲ್ಲಿ ಓಮ್ರಿಕಾನ್ ಜೆ‌ಎನ್-1 ರೂಪಾಂತರಿ ತಳಿ ಪತ್ತೆಯಾಗಿದೆ. ಇದರಲ್ಲಿ ಒಬ್ಬ  ಸಾವನ್ನಪ್ಪಿದ್ದಾನೆ. ಚನ್ನರಾಯಪಟ್ಟಣ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

ಸಾವನ್ನಪ್ಪಿದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಪರೀಕ್ಷೆ ಮಾಡಿದಾಗ ಆತನಿಗೆ ಜೆಎನ್‌ 1 ಸೋಂಕು ತಗುಲಿರುವುದು ದೃಢವಾಗಿದೆ. ಸಾವನ್ನಪ್ಪಿದ ಬಳಿಕ ಇದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ಸ್ಯಾಂಪಲ್‌ಗಳನ್ನು ಜೆನಾಮಿಕ್‌ಗೆ ಕಳುಹಿಸಿತ್ತು. ನಿನ್ನೆ ಐವರಲ್ಲಿ ಜೆ‌ಎನ್-1 ಸೋಂಕು ದೃಢಪಟ್ಟಿದೆ. ಉಳಿದ ನಾಲ್ವರು ಮನೆಯಲ್ಲೇ ಐಸೋಲೇಟ್‌ ಆಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

 

Share Post