ಚಂದ್ರನ ನೋಡಲು ಇಷ್ಟು ಕಸರತ್ತು ಬೇಕಾ..?; ಪಾಕ್ ಮಾಜಿ ಸಚಿವನಿಂದ ಚಂದ್ರಯಾನ-3 ಲೇವಡಿ..!
ಇಸ್ಲಾಮಾಬಾದ್; ಪಾಕಿಸ್ತಾನದ ನಾಯಕರು ಆಗಾಗ ಭಾರತದ ವಿರುದ್ಧ ಹೇಳಿಕೆ ನೀಡಿ ತನ್ನ ದುರ್ಗುಣವನ್ನು ಪ್ರದರ್ಶನ ಮಾಡುತ್ತಿರುತ್ತಾರೆ. ಚಂದ್ರಯಾನ-3ರ ವಿಚಾರದಲ್ಲೂ ಅದೇ ಆಗಿದೆ. ಚಂದ್ರಯಾನ-3ನ್ನು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಸಚಿವ ಫವಾದ್ ಚೌಧರಿ ಲೇವಡಿ ಮಾಡಿದ್ದಾರೆ. ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಅಗತ್ಯವಿರಲಿಲ್ಲ ಎಂಬ ಅವರ ಹೇಳಿಕೆ ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಫವಾದ್ ಅವರು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ಚಂದ್ರಯಾನ-3ನ್ನು ಹಾಸ್ಯ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ಏನು ಅನ್ನೋದು ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಯಾವಾಗ ಮುಳುಗುತ್ತಾನೆ ಅನ್ನೋದು ಕೂಡಾ ನಮಗೆ ಈಗಾಗಲೇ ಗೊತ್ತಿದೆ. ಹೀಗಿರುವಾಗ ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಬೇಕಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಇದು ಭಾರತೀಯರ ಕೆಂಗಣ್ಣಿಗೆ ಗುರುಯಾಗಿದೆ.