ಗಾಜಿಯಾಬಾದ್ನಲ್ಲಿ ಎರಡು ಗುಂಪುಗಳ ಮಾರಾಮಾರಿ; ವಿಡಿಯೋ ವೈರಲ್
ಗಾಜಿಯಾಬಾದ್: ಇಲ್ಲಿನ ಲೋನಿಯಾ ಠಾಣಾ ಟ್ರಾನಿಕಾ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹಾಡಹಗಲೇ ಲಾಗ್, ಮಚ್ಚುಗಳನ್ನು ಹಿಡಿದುಕೊಂಡು ಹೊಡೆದಾಡಿದ್ದಾರೆ. ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಲ್ಲಿನ ಕಾಸಿಮ್ ವಿಹಾರ್ ಕಾಲೋನಿಯಲ್ಲಿ ಇತ್ತೀಚೆಗೆ ಎರಡು ಗುಂಪುಗಳು ಬಡಿದಾಡಿಕೊಂಡಿವೆ. ಇಬ್ಬರು ವ್ಯಕ್ತಿಗಳು ಕತ್ತಿ, ಲಾಂಗುಗಳನ್ನು ಝಳಪಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಜಗಳವಿತ್ತು. ಇದು ಅತಿರೇಕಕ್ಕೆ ಹೋಗಿ ಲಾಂಗು, ಮಚ್ಚುಗಳಿಂದ ಮಾರಾಮಾರಿ ನಡೆದಿದೆ.
ಎಲ್ಲರೂ ನೋಡಿತ್ತಿದ್ದಾಗಲೇ ಎರಡೂ ಗುಂಪುಗಳವರೂ ಹೊಡೆದಾಟು ನಡೆಸಿದ್ದಾರೆ. ವ್ಯಕ್ತಿಯೊಬ್ಬ ಉದ್ದನೆಯ ಲಾಂಗ್ ಹಿಡಿದು, ವ್ಯಕ್ತಿಯೊಬ್ಬನನ್ನು ಕೊಲ್ಲಲು ಹೋಗುತ್ತಾನೆ. ಆದರೆ ಇದಕ್ಕೆ ಆಸ್ಪದ ಕೊಡದೆ ಒಬ್ಬ ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ಆತನನ್ನು ತಡೆಯುತ್ತಾರೆ. ಮತ್ತೊಬ್ಬ ವ್ಯಕ್ತಿ ಕೂಡಾ ಮಚ್ಚು ಹಿಡಿದು ಜಗಳಕ್ಕೆ ಬರುತ್ತಾನೆ. ಘಟನೆಯಲ್ಲಿ ವ್ಯಕ್ತಿಯೊಬ್ಬನ ಕತ್ತಿಗೆ ಗಾಯವಾಗಿದೆ.
ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಗ್ಗೆ ಟ್ರಾನಿಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಿಂದಾಗಿ ಕಾಸಿಮ್ ವಿಹಾರ್ ಕಾಲೋನಿ ಜನ ಬೆಚ್ಚಿಬಿದ್ದಿದ್ದಾರೆ.