NationalPolitics

ವಿಪಕ್ಷಗಳು ಬರೀ ನೋ ಬಾಲ್‌ ಎಸೆಯುತ್ತಿವೆ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ; ವಿಪಕ್ಷಗಳಿಗೆ ನಾನು ಐದು ವರ್ಷ ಸಮಯ ನೀಡಿದ್ದೆ. ಫೀಲ್ಡ್‌ ಸೆಟ್‌ ಮಾಡಿಕೊಂಡಿದ್ದ ಅವು, ಬರೀ ನೋ ಬಾಲ್‌ಗಳನ್ನೇ ಎಸೆಯುತ್ತಿದ್ದವು. ನಮ್ಮವರು ಸಿಕ್ಸರ್‌ , ಬೌಂಡರಿಗಳನ್ನೇ ಸಿಡಿಸಿದರು. ನಾವು ಸೆಂಚುರಿ ಬಾರಿಸಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಯಾರಿಗೆ ಕೆಟ್ಟದ್ದು ಬಯಸುತ್ತವೋ ಅವರಿಗೆ ಒಳ್ಳೆಯದಾಗುತ್ತದೆ. ಅದಕ್ಕೆ ಉದಾಹರಣೆ ನಾನೇ ಇದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ಏನೇ ಷಡ್ಯಂತ್ರ ಮಾಡಿದರೂ ಅದು ನನಗೇ ಒಳ್ಳೆಯದಾಗುತ್ತಿದೆ ಎಂದು ಹೇಳಿದರು.

ವಿಪಕ್ಷಗಳ ನಾಯಕರು ಕಪ್ಪು ಕಾಡಿಗೆಯಂತೆ ಕಪ್ಪು ಬಟ್ಟೆ ಧರಿಸಿ ಬಂದಿದ್ದಾರೆ. ಇದು ದೇಶಕ್ಕೆ ದೃಷ್ಟಿಯಾಗದಂತೆ ಮಾಡಿದೆ. ಈ ಕಾರಣಕ್ಕಾಗಿಯಾದರೂ ನಾವು ಅವರಿಗೆ ಧನ್ಯವಾದ ತಿಳಿಸಬೇಕು ಎಂದು ಕಟುಕಿದ್ದಾರೆ.

 

Share Post